×
Ad

ಮಧ್ಯ ಪ್ರಾಚ್ಯದಲ್ಲಿ ಇನ್ನೂ 3,500 ಸೈನಿಕರ ನಿಯೋಜನೆ: ಅಮೆರಿಕ

Update: 2020-01-04 23:10 IST

ವಾಶಿಂಗ್ಟನ್, ಜ. 4: ಅಮೆರಿಕವು ಇನ್ನೂ 3,500 ಸೈನಿಕರನ್ನು ಮಧ್ಯ ಪ್ರಾಚ್ಯದಲ್ಲಿ ನಿಯೋಜಿಸುತ್ತಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ನ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.

ಹೆಚ್ಚುವರಿ ಸೈನಿಕರನ್ನು 82ನೇ ವಾಯು ವಿಭಾಗದ ಗ್ಲೋಬಲ್ ರೆಸ್ಪಾನ್ಸ್ ಪಡೆಯಿಂದ ನಿಯೋಜಿಸಲಾಗುವುದು. ಇದೇ ಪಡೆಯಿಂದ ಈ ವಾರದ ಆರಂಭದಲ್ಲಿ ನೂರಾರು ಸೈನಿಕರನ್ನು ಬಗ್ದಾದ್‌ನಲ್ಲಿ ನಿಯೋಜಿಸಲಾಗಿತ್ತು.

ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಆವರಣದಲ್ಲಿ ಇರಾನ್ ಪರ ಪ್ರತಿಭಟನಕಾರರು ದಾಂಧಲೆಗೈದ ಬಳಿಕ ಈ ಸೈನಿಕರನ್ನು ಅಲ್ಲಿಗೆ ಕಳಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News