ವರದಿಗಾರ್ತಿಯನ್ನು ಚುಂಬನಕ್ಕೆ ಆಹ್ವಾನಿಸಿದ್ದ ಟ್ರಂಪ್ ?

Update: 2020-01-05 04:02 GMT

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗುವ ಮುನ್ನ ಟ್ರಂಪ್ ಟವರ್‌ನಲ್ಲಿದ್ದ ಕಚೇರಿಗೆ ಪರಸ್ಪರ ಚುಂಬಿಸುವ ಸಲುವಾಗಿ ದೂರವಾಣಿ ಮೂಲಕ ಆಹ್ವಾನಿಸಿದ್ದರು ಎಂದು ಫಾಕ್ಸ್ ನ್ಯೂಸ್‌ನ ಮಾಜಿ ವರದಿಗಾರ್ತಿ ಕರ್ಟ್ನಿ ಫ್ರೀಲ್ ಬಹಿರಂಗಪಡಿಸಿದ್ದಾರೆ.

ಟ್ರಂಪ್ ಅವರ ಫೇವರಿಟ್ ಟಿವಿ ಕಾರ್ಯಕ್ರಮವಾದ ಫಾಕ್ಸ್ & ಫ್ರಂಡ್ಸ್‌ನ ನಿರೂಪಕಿಯಾಗಿದ್ದ ಫ್ರೀಲ್ ತಮ್ಮ "ಟು ನೈಟ್ ಎಟ್ 10: ಕಿಕಿಂಗ್ ಬೂರ್ ಆ್ಯಂಡ್ ಬ್ರೇಕಿಂಗ್ ನ್ಯೂಸ್"ನಲ್ಲಿ ಈ ವಿಷಯ ಬಿಚ್ಚಿಟ್ಟಿದ್ದಾರೆ. ಫಾಕ್ಸ್ ಟಿವಿಯಲ್ಲಿ ಇರುವ "ಹಾಟೆಸ್ಟ್" ನಿರೂಪಕಿ ಎಂದು ಟ್ರಂಪ್ ತಮ್ಮನ್ನು ಕರೆದಿದ್ದರು ಎಂದು ಹೇಳಿಕೊಂಡಿದ್ದಾರೆ.

ಕಚೇರಿ ದೂರವಾಣಿಗೆ ಹಲವು ಬಾರಿ ಟ್ರಂಪ್ ಕರೆ ಮಾಡಿದ್ದರು ಎಂದು ವಿವರಿಸಿದ್ದಾರೆ. ಬಿಡುಗಡೆಯಾಗಲಿರುವ ಕೃತಿಗಳ ಆಯ್ದ ಭಾಗವನ್ನು ಡೈಲಿ ನ್ಯೂಸ್ ಪ್ರಕಟಿಸಿದ್ದು, ಇದರಲ್ಲಿ ಈ ಅಂಶಗಳು ಬೆಳಕಿಗೆ ಬಂದಿವೆ. ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆಯ ತೀರ್ಪುಗಾರರಾಗಲು ತಾನು ಬಯಸಿದ್ದು, ಆ ವೇಳೆಗೆ ಬದಲಿ ವ್ಯವಸ್ಥೆಯಾಗಿತ್ತು. ಬೇರೆ ಟಿವಿ ಚಾನಲ್‌ನಲ್ಲಿ ಇರುವ ಕಾರಣದಿಂದ ತೀರ್ಪುಗಾರಳಾಗುವುದು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದರು. ಆ ಬಳಿಕ, "ಯೂ ಶುಡ್ ಕಮ್ ಅಪ್ ಟೂ ಮೈ ಆಫೀಸ್ ಸಮ್‌ಟೈಮ್, ಸೋ ವಿ ಕ್ಯಾನ್ ಕಿಸ್" ಎಂದು ಟ್ರಂಪ್ ಹೇಳಿದ್ದಾಗಿ ಫ್ರೀಲ್ ವಿವರಿಸಿದ್ದಾರೆ.

"ನಾವಿಬ್ಬರೂ ವಿವಾಹಿತರೆಂದು ನನ್ನ ಭಾವನೆ" ಎಂದು ಟ್ರಂಪ್ ಆಹ್ವಾನವನ್ನು ನಿರಾಕರಿಸಿ ಕರೆ ಕಡಿತಗೊಳಿಸಿದ್ದಾಗಿ ಪುಸ್ತಕದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News