ಶಂಭೂರು: ಆಧಾರ್ ತಿದ್ದುಪಡಿ, ನೋಂದಣಿ ಕಾರ್ಯಕ್ರಮ
ಬಂಟ್ವಾಳ: ಶಂಭೂರು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ, ಪುತ್ತೂರು ವಿಭಾಗದ ಅಂಚೆ ಇಲಾಖೆಯ ಜಂಟಿ ಆಶ್ರಯದಲ್ಲಿ ಆಧಾರ್ ತಿದ್ದುಪಡಿ, ಮುಬೈಲ್ ಲಿಂಕ್, ವಿಳಾಸ ಬದಲಾವಣೆ, ಹೊಸನೋಂದಣಿ ಕಾರ್ಯಕ್ರಮವು ವ್ಯಾಯಾಮ ಶಾಲಾ ವಠಾರದಲ್ಲಿ ನಡೆಯಿತು.
ಪುತ್ತೂರು ವಿಭಾಗ ಅಂಚೆ ಇಲಾಖೆಯ ಉಪಾಧೀಕ್ಷಕ ಲೋಕನಾಥ ಪುತ್ತೂರು ಆಧಾರ್ ನೋಂದಣಿಯ ಮಾಹಿತಿ ನೀಡಿದರು. ಪುತ್ತೂರು ಅಂಚೆ ವಿಭಾಗದ ಉಪಾಧೀಕ್ಷಕ ಜೋಸೆಫ್ ರೋಡ್ರಿಗಸ್, ಬಂಟ್ವಾಳ ಅಂಚೆ ವಿಭಾಗದ ಉಪಾಧೀಕ್ಷಕ ಧನಂಜಯ್, ಐಪಿಪಿಬಿ ಅಧಿಕಾರಿಗಳಾದ ದೇವರಾಜ್ ಹೆಬ್ಬಾರ್ ಕೆ., ಬೇಬಿ, ಪದ್ಮಶುಭಾ ಎಂಟಿಎಸ್ ಪುತ್ತೂರು, ಪಾಣೆಮಂಗಳೂರು ಅಂಚೆ ಇಲಾಖೆಯ ರಾಜಲಕ್ಷ್ಮಿ ಪಿ.ಎ.ಪೆರುವಾಯಿಯ ಜಯಂತ ಕುಲಾಲ್ ಬಿಪಿಎಂ, ರಮ್ಯ ಬಿಸಿಎಂ ಕುಳಾಲು, ಗಣೇಶ್ ಪಿಬಿಪಿಎಂ ಆಗ್ರಹಾರ, ವನಿತಾ ಬಿಪಿಎಂ ಸಜೀಪಮೂಡ, ರಾಜೇಶ್ .ಕೆ, ಬಿಪಿಎಂ ಶಂಭೂರು ಹಾಜರಿದ್ದರು.
ಸುಮಾರು 452 ಮಂದಿ ಇದರ ಸದುಪಯೋಗ ಪಡೆದುಕೊಂಡರು. ಈ ಸಂದರ್ಭ ಗ್ರಾಪಂ ಸದಸ್ಯರಾದ ಜಯರಾಜ್, ಉದಯರಾಜ್, ವ್ಯಾಯಾಮ ಶಾಲೆಯ ಕಾರ್ಯದರ್ಶಿ ಬೋಜರಾಜ್ ಕೆ, ಕೋಶಾಧಿಕಾರಿ ಕಮಾಲಾಕ್ಷಿ, ಸದಸ್ಯರಾದ ಸಂತೋಷ್, ಕೇಶವ, ಪ್ರಕಾಶ್ ಎಂ., ಯೋಗೀಶ್, ಅನಿಲ್ ಕುಮಾರ್, ಎಂ.ಪುರುಷೋತ್ತಮ ಬಿ., ತಕ್ಷಣ್, ಕೂಸಪ್ಪ ಬಿ., ಉದಯ ಅಂತರ, ವರುಣ್ ರಾಜ್, ಕಾರ್ತಿಕ್.ಬಿ ಸಹಕರಿಸಿದರು. ವ್ಯಾಯಾಮ ಶಾಲೆಯ ಅಧ್ಯಕ್ಷ ಆನಂದ ಎ.ಶಂಭೂರು ಸ್ವಾಗತಿಸಿ, ವಂದಿಸಿದರು.