×
Ad

ಭಟ್ಕಳ: ಮನೆಗೆ ನುಗ್ಗಿ ನಗ-ನಗದು ಕಳವು

Update: 2020-01-05 17:02 IST

ಭಟ್ಕಳ: ಹಾಡುಹಗಲೇ ಮನೆಯೊಂದರಲ್ಲಿ ಕಳ್ಳತನ ಮಾಡಿ ಪರಾರಿಯಾದ ಘಟನೆ ತಾಲೂಕಿನ ಬೆಳಕೆ ಪಂಚಾಯತ್ ವ್ಯಾಪ್ತಿಯ ಕಂಚಿಕೇರಿ ಎಂಬಲ್ಲಿ ರವಿವಾರ ಬೆಳಗ್ಗೆ ನಡೆದಿದೆ.

ನಾಗರಾಜ ಗಣಪತಿ ಹೆಗಡೆ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿರುವುದಾಗಿದೆ. ಇವರು ಪುರೋಹಿತ ವೃತ್ತಿ ಮಾಡಿಕೊಂಡಿದ್ದು, ಮುಂಜಾನೆ ಕುಂದಾಪುರದ ಅಂಬಾಗಿಲಿನಲ್ಲಿ ಪೂಜೆಗೆ ತೆರಳಿದ್ದು, ಮನೆಯ ಮಾಲಕರಾದ ನಾಗರಾಜ ಹೆಗಡೆ ಅವರ ಪತ್ನಿ ಕೋಣಾರನಲ್ಲಿ ಅಂಗನವಾಡಿ ಶಿಕ್ಷಕರಾಗಿರುದರಿಂದ ಮುಂಜಾನೆ ಎಂದಿನಂತೆ ಅಂಗನವಾಡಿ ಕೆಲಸಕ್ಕೆ ತೆರಳಿದ್ದು, ಮಗಳು ಕಾಲೇಜಿಗೆ ಹೋಗಿದ್ದು ಮನೆಯಲ್ಲಿ ಯಾರೂ ಇರದ ವಿಷಯವನ್ನು ಗಮನಿಸಿದ ದುಷ್ಕರ್ಮಿಗಳು ಮನೆಯ ಬಾಗಿಲು ಮುರಿದು  75 ಸಾವಿರ ರೂ. ನಗದು ಮತ್ತು 10 ಗ್ರಾಂ ಚಿನ್ನದ ಚೈನ್, 3 ಗ್ರಾಂ. ಕಿವಿಯ ಒಲೆ 2, ಚಿನ್ನದ ಉಂಗುರ 2 ಸೇರಿ ಅಂದಾಜು 17 ರಿಂದ 18 ಗ್ರಾಂ. ಚಿನ್ನ ಕಳ್ಳತನ ಮಾಡಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News