ಯಕ್ಷಗಾನ ಕಲಾವಿದ ಕೊಪ್ಪಾಟೆ ಮುತ್ತಗೌಡ ನಿಧನ

Update: 2020-01-05 16:47 GMT

ಬೈಂದೂರು, ಜ.5: ಬಡಗುತಿಟ್ಟು ಯಕ್ಷಗಾನ ಕಲಾವಿದ, ಬೈಂದೂರು ತಾಲೂಕಿನ ಆಲೂರು ಗ್ರಾಮದ ಕೊಪ್ಪಾಟೆ ಮುತ್ತ ಗೌಡ(79) ತೀವ್ರ ಅನಾರೋಗ್ಯದಿಂದ ಜ.4ರಂದು ಕಾಲ್ತೋಡು ಗ್ರಾಮದ ಬಲಗೋಣು ಎಂಬಲ್ಲಿ ಇರುವ ಪತ್ನಿ ಮನೆಯಲ್ಲಿ ನಿಧನರಾದರು.

ಆರಂಭದಲ್ಲಿ ಸ್ತ್ರೀಪಾತ್ರದ ಮೂಲಕ ಯಕ್ಷಗಾನ ಕ್ಷೇತ್ರ ಪ್ರವೇಶಿಸಿದ ಇವರು ಬಳಿಕ ಪುಂಡುವೇಷ ಹಾಗೂ ಮುಂಡಾಸು ವೇಷಧಾರಿಯಾಗಿ ಪ್ರಸಿದ್ಧರಾದರು. ಮಾರಣಕಟ್ಟೆ, ಸೌಕೂರು, ಸಾಲಿಗ್ರಾಮ, ಪೆರ್ಡೂರು ಹಾಗೂ ಕಮಲಶಿಲೆ ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದ ಇವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಹಾಗೂ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಉಡುಪಿಯ ಯಕ್ಷಗಾನ ಕಲಾರಂಗವು ಕಳೆದ ನಾಲ್ಕು ವರ್ಷಗಳಿಂದ ಇವರಿಗೆ 2000 ರೂ. ಮೊತ್ತದ ಮಾಸಾಶನವನ್ನು ವಿಶೇಷ ನೆಲೆಯಲ್ಲಿ ನೀಡಲಾ ಗುತ್ತಿತ್ತು. ಮೃತರು ಹೆಂಡತಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News