×
Ad

ಮಂಗಳೂರು ಉತ್ತರ ಎಸಿಪಿಯಾಗಿ ಬೆಳ್ಳಿಯಪ್ಪ ಅಧಿಕಾರ ಸ್ವೀಕಾರ

Update: 2020-01-05 22:26 IST

ಮಂಗಳೂರು, ಜ.5: ಐಪಿಎಸ್ ಅಧಿಕಾರಿ ಶ್ರೀನಿವಾಸ ಗೌಡ ಅವರ ವರ್ಗಾವಣೆಯಿಂದ ತೆರವಾಗಿದ್ದ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಹುದ್ದೆಗೆ ನಕ್ಸಲ್ ನಿಗ್ರಹ ಪಡೆಯ ಡಿವೈಎಸ್‌ಪಿ ಕೆ.ಯು.ಬೆಳ್ಳಿಯಪ್ಪ ಅವರನ್ನು ನೇಮಕಗೊಂಡು ರವಿವಾರ ಸಂಜೆ ಅಧಿಕಾರಿ ಸ್ವೀಕರಿಸಿದರು.

ಬೆಳ್ಳಿಯಪ್ಪ ಈ ಹಿಂದೆ ಬಂಟ್ವಾಳ, ಮಂಗಳೂರು ದಕ್ಷಿಣ ಸೇರಿದಂತೆ ಹಲವೆಡೆ ಸಬ್ ಇನ್‌ಸ್ಪೆಕ್ಟರ್, ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಡಿವೈಎಸ್‌ಪಿ ಶ್ರೇಣಿಗೆ ಬಡ್ತಿ ಪಡೆದ ಬಳಿಕ ನಕ್ಸಲ್ ನಿಗ್ರಹ ಪಡೆಯಲ್ಲಿದ್ದರು.

ನೇಮಕ: ಬಂಟ್ವಾಳ ಉಪ ವಿಭಾಗದ ಡಿವೈಎಸ್‌ಪಿ ಹುದ್ದೆಗೆ ವೆಲೆಂಟೈನ್ ಡಿಸೋಜ ಅವರನ್ನು ನೇಮಿಸಲಾಗಿದೆ. ವೆಲೆಂಟೈನ್ ಡಿಸೋಜ ಅವರು ಜಿಲ್ಲೆಯ ಹಲವೆಡೆ ಸಬ್ ಇನ್‌ಸ್ಪೆಕ್ಟರ್, ಇನ್‌ಸ್ಪೆಕ್ಟರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು.

ವೆಲೆಂಟೈನ್ ಡಿಸೋಜ ದೀರ್ಘ ಕಾಲ ಮಂಗಳೂರು ನಗರ ಸಿಸಿಬಿ ಇನ್‌ಸ್ಪೆಕ್ಟರ್ ಹುದ್ದೆಯಲ್ಲಿದ್ದರು. ಸಿಸಿಆರ್‌ಬಿ ಎಸಿಪಿ ಹುದ್ದೆ ಯಲ್ಲೂ ಕೆಲಸ ಮಾಡಿದ್ದರು. ನಂತರ ಭಟ್ಕಳ ಉಪ ವಿಭಾಗದ ಡಿವೈಎಸ್‌ಪಿ ಹುದ್ದೆಗೆ ವರ್ಗಾವಣೆ ಹೊಂದಿದ್ದರು. ಜಿಲ್ಲಾ ಅಪರಾಧ ತನಿಖಾ ದಳದ ಡಿವೈಎಸ್‌ಪಿ ಹುದ್ದೆಗೆ ಇತ್ತೀಚೆಗಷ್ಟೇ ವರ್ಗಾವಣೆ ಮಾಡಲಾಗಿತ್ತು. ಅವರನ್ನು ಬಂಟ್ವಾಳ ಡಿವೈಎಸ್‌ಪಿ ಹುದ್ದೆಗೆ ನೇಮಿಸಿ ಆದೇಶ ಹೊರಡಿಸಿದ್ದಾರೆ. ವೆಲೆಂಟೈನ್ ಡಿಸೋಜ ಅವರು ರಡು ದಿನಗಳಲ್ಲಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News