ಕದ್ರಿ ದೇವಳ ತೀರ್ಥಕೆರೆಗೆ ಬಿದ್ದು ಬಾಲಕ ಅಸ್ವಸ್ಥ
Update: 2020-01-05 22:33 IST
ಮಂಗಳೂರು : ನಗರದ ಕದ್ರಿ ದೇವಸ್ಥಾನದಲ್ಲಿರುವ ತೀರ್ಥಕೆರೆಗೆ ಬಿದ್ದು ಅಥಣಿಯ ಬಾಲಕನೊಬ್ಬ ಅಸ್ವಸ್ಥಗೊಂಡ ಘಟನೆ ರವಿವಾರ ಸಂಜೆ ನಡೆದಿದೆ.
ಅಥಣಿಯ ಸಂದೇಶ್ (11) ಅಸ್ವಸ್ಥಗೊಂಡ ಬಾಲಕ.
ಅಥಣಿ ಪ್ರಾಥಮಿಕ ಶಾಲೆಯ ಸುಮಾರು 59 ವಿದ್ಯಾರ್ಥಿಗಳು ಮತ್ತು 5 ಮಂದಿ ಶಿಕ್ಷಕರು ರವಿವಾರ ಸೈನಿಕ ಶಾಲೆ ಪರೀಕ್ಷೆಯ ನಿಮಿತ್ತ ನಗರಕ್ಕೆ ಆಗಮಿಸಿದ್ದರು. ಪರೀಕ್ಷೆ ಮುಗಿದು ಸಂಜೆಯ ವೇಳೆ ಕದ್ರಿ ದೇವಸ್ಥಾನಕ್ಕೆ ತೆರಳಿದ್ದು ಈ ಸಂದರ್ಭ ಸಂದೇಶ್ ಅಚಾನಕ್ ತೀರ್ಥಕೆರೆಗೆ ಬಿದ್ದು ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಕದ್ರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.