ಸಾಲೆತ್ತೂರು: ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ 229ನೇ ರಕ್ತದಾನ ಶಿಬಿರ
ಸಾಲೆತ್ತೂರು, ಜ. 5: ನಿತ್ಯಾಧರ್ ಫ್ರೆಂಡ್ಸ್ ಸಾಲೆತ್ತೂರು ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಸಹಯೋಗದೊಂದಿಗೆ ಭಾರತೀಯ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಕಾರದೊಂದಿಗೆ ಸಾಲೆತ್ತೂರು ಸೌಹಾರ್ದ ಭವನದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ 229ನೇ ರಕ್ತದಾನ ಶಿಬಿರ ನಡೆಯಿತು.
ನಿತ್ಯಾಧರ್ ಚರ್ಚ್ ಧರ್ಮಗುರು ವಂ. ಹೆನ್ರಿ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ಚಿಂತನೆಯಲ್ಲಿ ನಡೆಯುವ ಸೌಹಾರ್ದ ರಕ್ತದಾನ ಶಿಬಿರಗಳು ಸಮಾಜದ ಸ್ವಾಸ್ಥ್ಯದ ಅಭ್ಯುದಯಕ್ಕಾಗಿ ಮುನ್ನುಡಿಯಾಗಲಿದೆ ಎಂದರು.
ವೇದಿಕೆಯಲ್ಲಿ ನಿತ್ಯಾಧರ್ ಚರ್ಚ್ ಉಪಾಧ್ಯಕ್ಷ ಫೆಲಿಕ್ಸ್ ವೇಗಸ್, ಕೋಳ್ನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಬದ್ರಿಯಾ ಜುಮಾ ಮಸೀದಿ ಸಾಲೆತ್ತೂರು ಇದರ ಖತೀಬ್ ಅಬ್ದುಲ್ಲ ಮದನಿ, ಬಂಟ್ವಾಳ ವರ್ತಕರ ವಿವಿದೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಅಗರಿ ಮಂಜುನಾಥ್ ರೈ, ನಿವೃತ್ತ ಶಿಕ್ಷಕಿ ಹಾಗೂ ಸಾಹಿತಿ ಅನುಸೂಯ ರಾವ್, ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯ ನಿರ್ವಾಹಕ ಫಯಾಝ್ ಮಾಡೂರು ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭ ಬ್ಲಡ್ ಡೋನರ್ಸ್ ಮಂಗಳೂರು ಇದರ ಕಾರ್ಯನಿರ್ವಾಹಕರಾದ ಸಲಾಂ ಚೊಂಬುಗುಡ್ಡೆ, ದಾವೂದ್ ಬಜಾಲ್, ರಝಾಕ್ ಸಾಲ್ಮರ, ಇರ್ಷಾದ್ ಉಚ್ಚಿಲ, ಸದಸ್ಯರಾದ ಮುನಾಫಿಲ್ ಜೆಪ್ಪು, ನಿತ್ಯಾಧರ್ ಸಂಸ್ಥೆಯ ಪದಾಧಿಕಾರಿಗಳಾದ ರಾಕೇಶ್ ಡಿಸೋಜ, ನಿತೀಷ್ ಡಿಸೋಜ ಉಪಸ್ಥಿತರಿದ್ದರು.
ನಿತ್ಯಾದರ್ ಸಂಸ್ಥೆಯ ರೋಯಿಸ್ ಡಿಸೋಜ ಸ್ವಾಗತಿಸಿ, ರಶ್ಮಿ ಡಿಸೋಜ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.