ಮಂಗಳೂರು: ಯುವಜನರ ಆರೋಗ್ಯ-ಅರಿವಿನ ಅಭಿಯಾನಕ್ಕೆ ಚಾಲನೆ
Update: 2020-01-06 17:39 IST
ಮಂಗಳೂರು, ಜ. 6: ಸಂವಾದ-ಯುವ ಮುನ್ನಡೆ ಕರ್ನಾಟಕ, ಯುವಜನ ಹಕ್ಕುಗಳಿಗಾಗಿ ಮತ್ತು ಯುವಜನ ಆಯೋಗ ಸ್ಥಾಪನೆಗಾಗಿ ಯುವಜನರ ನಡೆ ಹಾಗೂ ಯುವಜನರ ಆರೋಗ್ಯ, ಅರಿವಿನ ಅಭಿಯಾನಕ್ಕೆ ಬಜ್ಪೆ ಸುಂಕದಕಟ್ಟೆ ಅನುದಾನಿತ ಶ್ರೀ ನಿರಂಜನ ಸ್ವಾಮಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಡಾ. ಲತಾ ಕೆ ಕೊಟ್ಯಾನ್ ಚಾಲನೆ ನೀಡಿದರು.
ರಾಜ್ಯದ ಎಲ್ಲಾ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಧ್ಯಾಹ್ನದ ಬಿಸಿ ಊಟ ಲಭಿಸುವುದರ ಮೂಲಕ ಆರೋಗ್ಯದ ಅರಿವಿನ ಈ ಜಾಥವನ್ನು ಸಂವಾದ ಯುವ ಸಂಪನ್ಮೂಲ ಸಂಸ್ಥೆಯಿಂದ ರಾಜ್ಯಾದ್ಯಂತ ನಡೆಸುತ್ತಿದೆ.
ಕಾರ್ಯಕ್ರಮದಲ್ಲಿ ಮಂಗಳೂರು ಬದುಕು-ಸಂವಾದ ಯುವ ಸಂಪನ್ಮೂಲ ಕೇಂದ್ರದ ಮಂಜುಳಾ ಸುನೀಲ್, ಧರ್ಣಪ್ಪ, ಆಕಾಶ್ ಕೆ, ಬಿಂದ್ಯಾ, ಪ್ರಾಣೇಶ್ ನೆಲ್ಯಾಡಿ ಮತ್ತು ನಗರ ಸಂಶೋಧನಾ ಕೇಂದ್ರದ ಸಂಯೋಜಕಿ ಹರಿಣಿ ಮತ್ತು ಸಂವಾದ ಒಡನಾಡಿ ಖಲೀಫಾ ಬೆಳ್ತಂಗಡಿ, ಇಸ್ಮಾಯಿಲ್ ಕೆ, ನಚಿಕೇತ್, ಸಾಗರ್, ದಿವ್ಯಾ, ಅಶ್ವಿನಿ ಮತ್ತು ಮಾನ್ಯ ಉಪಸ್ಥಿತರಿದ್ದರು.