ಬಿಐಟಿಯಿಂದ ಸಿಇಟಿ ಅಣಕು ಪರೀಕ್ಷೆ

Update: 2020-01-06 12:50 GMT

ಮಂಗಳೂರು, ಜ.7: ಬಿಐಟಿ ಮತ್ತು ಬೀಡ್ಸ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಸಿಇಟಿ ಅಣಕು ಪರೀಕ್ಷೆ ಹಾಗೂ ವೃತ್ತಿಪರ ಕೋರ್ಸುಗಳ ಮಾರ್ಗದರ್ಶನ ಶಿಬಿರವು ಬಂಟ್ವಾಳ ತಾಲೂಕಿನ ಬೆಂಜನಪದವಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.

 ಬಿಐಟಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಶಾಮೀಜ್ ವೃತ್ತಿಪರ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು. ಪ್ರೊ.ಇಮ್ರಾನ್ ಅಹ್ಮದ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮಾಡಿದರು. ಪ್ರೊ.ಮುಸ್ತಫಾ ಖಲೀಲ್ ಹಾಗೂ ಸಫ್ವಾನ್ ಸಿಇಟಿ ಅಣಕು ಪರೀಕ್ಷೆ ನಡೆಸಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲ ಗಿರಿಶ್ಚಂದ್ರ ಹಾಗೂ ಪ್ರಾಧ್ಯಾಪಕ ರವಿಚಂದ್ರ ಮಯ್ಯ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News