×
Ad

ಧರ್ಮ ಬೋಧಿಸಿದಂತೆ ನಡೆದು ತೋರಿಸಬೇಕು: ವಿದ್ಯಾದರ್ ಪುರಾಣಿಕ್

Update: 2020-01-06 21:57 IST

ಕಾಪು, ಜ.6: ಭೂಮಿಯಲ್ಲಿ ಜೀವಿಸುವ ಪ್ರತಿಯೊಬ್ಬ ಆಸ್ತಿಕ ವ್ಯಕ್ತಿ ದೇವನನ್ನು ನಂಬುತ್ತಾನೆ ಮತ್ತು ತನಗೆ ಗೊತ್ತಿರುವ ಕ್ರಮದಂತೆ ಆರಾಧಿಸುತ್ತಾನೆ. ಧರ್ಮ ದಲ್ಲಿ ಇರುವ ಒಳ್ಳೆಯ ಅಂಶಗಳು, ಅದು ಯಾವ ಧರ್ಮಗಳಲ್ಲಿ ಇದ್ದರೂ ಅದನ್ನು ನಾವು ಸ್ವೀಕರಿಕೊಳ್ಳ ಬೇಕು. ಧರ್ಮದ ಬೋಧನೆಯಂತೆ ನಡೆದು ಜೀವಿಸಬೇಕು ಎಂದು ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನ ಪಿಯು ವಿಭಾಗದ ಪ್ರಾಂಶುಪಾಲ ವಿದ್ಯಾಧರ ಪುರಾಣಿಕ್ ಹೇಳಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲ ಇದರ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾದ ಪ್ರವಾದಿ ಮುಹಮ್ಮದ್(ಸ)ರವರ ಜೀವನ ಮತ್ತು ಸಂದೇಶದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿ ಮಲ್ಪೆ ಅಬೂಬಕರ್ ಸಿದ್ದೀಕ್ ಮಸ್ಜಿದ್‌ನ ಧರ್ಮ ಗುರು ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ಮಾತನಾಡಿ, ಓರ್ವ ಮುಸ್ಲಿಮನಾಗಿದ್ದವನು, ಬೇರೆ ಧರ್ಮವನ್ನು ಧೂಷಿಸಿದರೆ ಕುರ್‌ಆನ್ ಪ್ರಕಾರ ಆತ ಮುಸ್ಲಿಮ್ ಅಲ್ಲ. ಓರ್ವ ಧರ್ಮ ಗುರುವಾಗಿ ನಾನು, ನನ್ನ ಬಳಿ ವೇದ, ಭಗವದ್ಗೀತೆ, ರಾಮಾಯಣ, ಮಹಾಭಾರತ, ಬೈಬಲ್ ಗ್ರಂಥಗಳನ್ನು ಅಧ್ಯ ಯನಕ್ಕಾಗಿ ಇಟ್ಟುಕೊಂಡ್ಡಿದ್ದೆನೆ. ಈ ಗ್ರಂಥಗಳಲ್ಲಿ ಕೂಡಾ ಇತರ ಧರ್ಮಗಳನ್ನು ಧೂಷಿಸಬೆೀಕೆಂದು ಬೋಧಿಸುವುದಿಲ್ಲ ಎಂದರು.

ಮನುಷ್ಯನು ಜೀವಿಸುವ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಧರ್ಮ ದಲ್ಲಿರುವ ಒಳಿತುಗಳ ಭೋದನೆಯನ್ನು ತಮ್ಮ ಜೀವನದಲ್ಲಿ ಮೈಗೂಡಿಸಿ ಜೀವಿಸಿದರೆ ಇಡೀ ವಿಶ್ವದಲ್ಲಿ ಶಾಂತಿ, ನೆಮ್ಮದಿ, ಅಭಿವೃದ್ಧಿ, ಸೌಹಾರ್ದತೆ ನೆಲೆಸಲು ಸಾಧ್ಯವಿದೆ ಎಂದು ಅವರು ಹೇಳಿದರು.

ಜಿಲ್ಲಾ ಸಂಚಾಲಕ ಶಬ್ಬೀರ್ ಮಲ್ಪೆ, ಶಬಿಹ್ ಅಹಮದ್ ಕಾಝಿ ಉಪಸ್ಥಿತರಿದ್ದರು. ಎಸ್‌ಐಓ ಸದಸ್ಯ ಮುಯಸ್ಸರ್ ಕುರ್‌ಆನ್ ಪಠಿಸಿದರು. ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕಾಪು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸ್ಥಾನೀಯ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಆದಮ್ ಕಾರ್ಯ ಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News