×
Ad

ಕಾಪು ಲೈಟ್‌ಹೌಸ್ ಉತ್ಸವ

Update: 2020-01-06 22:04 IST

ಉಡುಪಿ, ಜ.6:ಜಿಲ್ಲಾ ಉತ್ಸವದ ಅಂಗವಾಗಿ ಕಾಪು ಲೈಟ್‌ಹೌಸ್‌ನಲ್ಲಿ ಇದೇ ಮೊದಲ ಬಾರಿಗೆ ಲೈಟ್ ಹೌಸ್ ಉತ್ಸವವನ್ನು ಏರ್ಪಡಿಸಲು ನಿರ್ಧರಿಸಲಾಗಿದೆ.

ಸೋಮವಾರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಈ ಸಂಬಂಧ ಜಿಲ್ಲಾಧಿಕಾರಿ ಜಿ. ಜಗದೀಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಉತ್ಸವದ ಆಂಗವಾಗಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ಚರ್ಚಿಸಲಾಯಿತು.

ಕಾಪು ಲೈಟ್ ಹೌಸ್‌ಗೆ ವಿದ್ಯುತ್ ಬೆಳಕಿನ ಅಲಂಕಾರ ಹಾಗೂ ಸಂಗೀತ ಪ್ರದರ್ಶನ ಮತ್ತು ವಿವಿಧ ಶೈಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಥಳೀಯ ಗುರುತಿಸಲ್ಪಟ್ಟ ಕಲಾವಿದರಿಂದ ಕಾರ್ಯಕ್ರಮಗಳು, ಸ್ಥಳೀಯ ಮೀನುಗಾರ ರಿಂದ ಬೋಟ್‌ರೇಸ್, ಗಾಳಿಪಟ ಉತ್ಸವ, ಬೀಚ್ ಯೋಗಾಸನ ಕಾರ್ಯಕ್ರಮ, ಆಹಾರ ಮಳಿಗೆ ಹಾಗೂ ಇತರೆ ಕರಕುಶಲ ಮಳಿಗೆ ಸ್ಥಾಪನೆ, ವೈನ್ ಉತ್ಸವ, ಸರ್ಫಿಂಗ್, ವಿವಿಧ ಆಟೋಟ ಸ್ವರ್ಧೆಗಳು ಮತ್ತು ಬೀಚ್ ಮ್ಯಾರಥಾನ್, ಪೋಟೋಗ್ರಾಪ್ ಮತ್ತು ವಿಡಿಯೋ ಸ್ಪರ್ಧೆ, ಕಾಪು ಬೀಚ್‌ನ ಪ್ರತಿಬಿಂಬಿಸುವ ಚಿತ್ರಕಲೆ ಮತ್ತು ಕಲಾಶಿಬಿರ, ಗೂಡುದೀಪ ಸ್ವರ್ಧೆ, ಸೆಲ್ಪಿ ಪಾಯಿಂಟ್ಸ್, ಟ್ಯಾಟೂ, ಸ್ಟ್ರಿಟ್ ಪ್ಲೇ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ರೂಪುರೇಷೆ ಹಾಕಿಕೊಳ್ಳಲು ಜಿಲ್ಲಾಧಿಕಾರಿ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದವರು ತಿಳಿಸಿದರು.

ಈ ಕಾರ್ಯಕ್ರಮದ ದಿನಾಂಕ ನಿಗದಿ ಹಾಗೂ ಇನ್ನಷ್ಟು ಸಿದ್ಧತೆ ಮಾಡಿಕೊಳ್ಳಲು ಕಾಪುವಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂ ಸಂಸ್ಥೆಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಉಡುಪಿ ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರವಾಸೋದ್ಯಮ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News