ಗ್ರಾಪಂಗಳಲ್ಲೂ ಆರೋಗ್ಯ ಕಾರ್ಡ್ ವಿತರಣೆ
ಉಡುಪಿ, ಜ.6:ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆ ಯಡಿಯಲ್ಲಿ ಆರೋಗ್ಯ ಕಾರ್ಡ್‌ಗಳು ಪ್ರತೀ ಗ್ರಾಪಂಗಳಲ್ಲೂ ಈಗ ಲಭ್ಯವಿದೆ. ಸರಕಾರದ ಸೂಚನೆಯಂತೆ ಜಿಲ್ಲೆಯ ಪ್ರತೀ ಗ್ರಾಪಂಗಳಲ್ಲೂ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಆರೋಗ್ಯ ಇಲಾಖೆಯು ಮನವಿ ಮಾಡಿದೆ.
ಗ್ರಾಪಂಗಳಲ್ಲಿ ಮಾತ್ರವಲ್ಲದೇ ಜಿಲ್ಲಾ ಆಸ್ಪತ್ರೆ ಅಜ್ಜರಕಾಡು, ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಹಾಗೂ ಕಾರ್ಕಳ, ಬೈಂದೂರು/ ಕೋಟ/ ಬ್ರಹ್ಮಾವರ/ಶಿರ್ವ/ನಿಟ್ಟೆ ಹಾಗೂ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ ಮತ್ತು ಮಣಿಪಾಲ, ಡಯಾನ ಥಿಯೇಟರ್ ಹಾಗೂ ಅಂಬಾಗಿಲು ಇಲ್ಲಿ ಇರುವ ಕರ್ನಾಟಕ 01 ಸೆಂಟರ್, ಜಿಲ್ಲಾ ಆಸ್ಪತ್ರೆಯಲ್ಲಿರುವ ಎಆರ್‌ಟಿ ಸೆಂಟರ್ ಹಾಗೂ ಜಿಲ್ಲೆಯಲ್ಲಿರುವ 92 ಸೇವಾ ಸಿಂಧು ಕೇಂದ್ರಗಳ ಮುಖಾಂತರವೂ ಈ ಕಾರ್ಡ್‌ಗಳನ್ನು ನೀಡುತ್ತಿದ್ದು, ಇನ್ನು ಮುಂದೆಯೂ ಕೂಡ ಈ ಕೇಂದ್ರಗಳಲ್ಲಿ ಕಾಡ್ ನೀಡುವ ಕೆಲಸ ಮುಂದುವರಿಯಲಿದೆ ಎಂದು ಜಿಲ್ಲಾ ಅರೋಗ್ಯ ಇಲಾಖಾ ಪ್ರಕಟಣೆ ತಿಳಿಸಿದೆ.