ಜ.7: ಅಲ್ ಮದೀನಾ ಗುಲ್ಶನ್ ಕಾರ್ಯಕ್ರಮಕ್ಕೆ ಚಾಲನೆ

Update: 2020-01-06 16:53 GMT

ಮಂಜನಾಡಿ, ಜ 6: ಅಲ್ ಮದೀನಾ ದಅವಾ ಕಾಲೇಜು ವಿದ್ಯಾರ್ಥಿಗಳ ವಾರ್ಷಿಕ ಕಲಾ ಸ್ಪರ್ಧೆ  "ಗುಲ್ಶನ್ 2020" ಕಾರ್ಯಕ್ರಮವು ಜ. 8,9,10ರಂದು ಅಲ್ ಮದೀನಾ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಜ.7ರಂದು  ಮಗ್ರಿಬ್ ನಮಾಝ್ ಬಳಿಕ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಸಚಿವ ಪ್ರೊ ಡಾ. ಎಎಂ ಖಾನ್‌ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಲೇಖಕ, ನ್ಯಾಯವಾದಿ ಪುನೀತ್ ಅಪ್ಪು, ಪತ್ರಕರ್ತ ಹಂಝ ಮಲಾರ್ ಭಾಗವಹಿಸುವರು. ದಅವಾ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಸಲಾಂ ಅಹ್ಸನಿ ಇರ್ಫಾನ್ ನೂರಾನಿ, ಮುನೀರ್ ಅಹ್ಮದ್ ಸಖಾಫಿ, ಅಶ್ರಫ್  ಸಖಾಫಿ ಮತ್ತಿತರರು ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News