×
Ad

77ನೇ ‘ಗೋಲ್ಡನ್ ಗ್ಲೋಬ್’ ಸಿನೇಮಾ ಪ್ರಶಸ್ತಿ ಪ್ರದಾನ

Update: 2020-01-06 23:55 IST

ಕ್ಯಾಲಿಫೋರ್ನಿಯ, ಜ. 6: 77ನೇ ‘ಗೋಲ್ಡನ್ ಗ್ಲೋಬ್’ ಸಿನೇಮಾ ಪ್ರಶಸ್ತಿ ಪ್ರದಾನ ಅಮೆರಿಕದ ಕ್ಯಾಲಿಫೋರ್ನಿಯದ ಬೆವರ್ಲಿ ಹಿಲ್ಸ್‌ನಲ್ಲಿ ರವಿವಾರ ನಡೆಯಿತು. ಮೊದಲ ಮಹಾಯುದ್ಧದ ಕತೆಯನ್ನು ಒಳಗೊಂಡ ಚಿತ್ರ ‘1917’ ಶ್ರೇಷ್ಠ ಚಿತ್ರ ಪ್ರಶಸ್ತಿ ಪಡೆಯಿತು. ಇದರೊಂದಿಗೆ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದ ‘ಮ್ಯಾರೇಜ್ ಸ್ಟೋರಿ’, ‘ದ ಐರಿಶ್‌ಮ್ಯಾನ್’, ‘ದ ಟು ಪೋಪ್ಸ್’ ಮತ್ತು ‘ಜೋಕರ್’ ಚಿತ್ರಗಳನ್ನು ಅದು ಹಿಂದಿಕ್ಕಿತು.

ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯನ್ನು ಅದೇ ಚಿತ್ರದ ನಿರ್ದೇಶಕ ಸ್ಯಾಮ್ ಮೆಂಡಿಸ್ ಪಡೆದುಕೊಂಡರು.

 ‘ಜೂಡಿ’ ಚಿತ್ರದ ಅಭಿನಯಕ್ಕಾಗಿ ರೆನೀ ಝೆಲ್ವೆಗರ್ ಶ್ರೇಷ್ಠ ನಟಿ ಪ್ರಶಸ್ತಿ ಪಡೆದರು. ಅದೇ ವೇಳೆ, ‘ಜೋಕರ್’ ಚಿತ್ರದ ಅಭಿನಯಕ್ಕಾಗಿ ಜೋಕಿನ್ ಫೀನಿಕ್ಸ್‌ಗೆ ಶ್ರೇಷ್ಠ ನಟ ಪ್ರಶಸ್ತಿ ಒಲಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News