ಜ.8ರ ಮುಷ್ಕರಕ್ಕೆ ಬಸ್ ಮಾಲಕರ ಬೆಂಬಲ ಇಲ್ಲ: ಸುರೇಶ್ ನಾಯಕ್
Update: 2020-01-07 14:35 IST
ಉಡುಪಿ, ಜ.7: ವಿವಿಧ ಸಂಘಟನೆಗಳು ಜ.8ರಂದು ಕರೆ ನೀಡಿರುವ ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಉಡುಪಿ ಮತ್ತು ಮಂಗಳೂರಿನ ಬಸ್ ಮಾಲಕರ ಬೆಂಬಲ ಇಲ್ಲ ಮತ್ತು ಖಾಸಗಿ ಬಸ್‌ಗಳು ಎಂದಿನಂತೆ ಓಡಾಟ ನಡೆಸಲಿವೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮತ್ತು ಉಡುಪಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.