ನಾವ್ಯಾರೂ ಹೆದರಿಲ್ಲ ಎನ್ನುವುದೇ ಹೆಮ್ಮೆಯ ವಿಚಾರ: ಸಿಎಎ ಪ್ರತಿಭಟನೆಗಳ ಬಗ್ಗೆ ದೀಪಿಕಾ ಪಡುಕೋಣೆ
Update: 2020-01-07 16:00 IST
ಮುಂಬೈ: ಸಿಎಎ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ದೀಪಿಕಾ ಪಡುಕೋಣೆ, 'ಸಾಮಾಜಿಕವಾಗಿ ನಾವ್ಯಾರೂ ಭೀತಿಗೊಂಡಿಲ್ಲ ಎನ್ನುವುದು ಹೆಮ್ಮೆಯ ವಿಚಾರ. ಜನ ಬೀದಿಗಿಳಿದಿರುವುದು ಒಳ್ಳೆಯ ವಿಚಾರ. ಜನ ತಮ್ಮ ಅಭಿಪ್ರಾಯವನ್ನು ಗಟ್ಟಿಧ್ವನಿಯಲ್ಲಿ ಬೀದಿಯಲ್ಲಾಗಲೀ, ಮನೆಯಿಂದಾಗಲೀ, ವ್ಯಕ್ತಪಡಿಸಲು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಅವರ ಬಗ್ಗೆ ಹೆಮ್ಮೆ ಎನಿಸುತ್ತಿದೆ' ಎಂದು ಹೇಳಿದ್ದಾರೆ.
ಬಹು ನಿರೀಕ್ಷಿತ 'ಚಪಾಕ್' ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ದೀಪಿಕಾ ಪಡುಕೋಣೆಯವರನ್ನು, ದೇಶಾದ್ಯಂತ ನಡೆಯುತ್ತಿರುವ ಸಿಎಎ ವಿರುದ್ಧದ ಪ್ರತಿಭಟನೆ ಬಗ್ಗೆ ಪ್ರಶ್ನಿಸಿದಾಗ ಮೇಲಿನಂತೆ ಪ್ರತಿಕ್ರಿಯಿಸಿದರು.
"ನಮ್ಮ ಜೀವನದಲ್ಲಿ ಅಥವಾ ಸಮಾಜದಲ್ಲಿ ಯಾವುದೇ ಬದಲಾವಣೆ ನೋಡಬೇಕಾದರೆ, ಎಲ್ಲರ ಅಭಿಪ್ರಾಯಗಳನ್ನು ಒಂದೆಡೆ ಸಂಗ್ರಹಿಸುವುದು ತೀರಾ ಅಗತ್ಯ" ಎಂದು ಅವರು ಇದೇ ಸಂದರ್ಭ ಹೇಳಿದರು.