×
Ad

ಬೆಳ್ವೆ: 797 ಮಂದಿಯ ಆಧಾರ್ ನೋಂದಣಿ, ತಿದ್ದುಪಡಿ

Update: 2020-01-07 18:33 IST

ಉಡುಪಿ, ಜ.7: ಭಾರತೀಯ ಅಂಚೆ ಇಲಾಖೆ ಉಡುಪಿ ಇದರ ವತಿ ಯಿಂದ ಬೆಳ್ವೆ ವ್ಯವಸಾಯ ಸೇವಾ ಸಹಕಾರ ಸಂಘ, ಲಯನ್ಸ್ ಕ್ಲಬ್ ಬೆಳ್ವೆ ಸಹಯೋಗದಲ್ಲಿ ಆಧಾರ್ ಶಿಬಿರವನ್ನು ಇತ್ತೀಚೆಗೆ ಬೆಳ್ವೆಯ ದಿ.ಸಂದೇಶ ಕಿಣಿ ಮೆಮೋರಿಯಲ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಶಿಬಿರವನ್ನು ಉದ್ಘಾಟಿಸಿದ ಉಡುಪಿ ಅಂಚೆ ಅಧೀಕ್ಷಕ ಸುಧಾಕರ ಜಿ. ದೇವಾಡಿಗ ಮಾತನಾಡಿ, ಉಡುಪಿ ಅಂಚೆ ವಿಭಾಗದಲ್ಲಿ ಈಗಾಗಲೇ 25ಕ್ಕಿಂತ ಹೆಚ್ಚಿನ ಶಿಬಿರಗಳನ್ನು ಆಯೋಜಿಸುವ ಮೂಲಕ ಭಾರತೀಯ ಅಂಚೆ ಇಲಾಖೆ ಜನರ ಆವಶ್ಯಕತೆಗಳಿಗೆ ಅತ್ಯುತ್ತಮವಾಗಿ ಸ್ಪಂದಿಸುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಬೆಳ್ವೆ ವ್ಯವಸಾಯ ಸೇವಾ ಸಹಕಾರ ಸಂಘ ಅಧ್ಯಕ್ಷ ಜಯರಾಂ ಶೆಟ್ಟಿ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಂದ್ರ ಕಿಣಿ ಬೆಳ್ವೆ, ಗೋಳಿ ಯಂಗಡಿ ಸರಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ನಾಗರಾಜ್ ವೈದ್ಯ ಮಾತನಾಡಿ ದರು. ಆಧಾರ್ ತಿದ್ದುಪಡಿಗೆ ಅತ್ಯವಶ್ಯಕವಾದ ದ್ರಢೀಕರಣ ಪ್ರಮಾಣ ಪತ್ರವನ್ನು ಸ್ಥಳದಲ್ಲೇ ಒದಗಿಸಲಾಯಿತು.

ಸಹಕಾರ ಸಂಘದ ಸಿಇಓ ಕೀರ್ತಿ ಕುಮಾರ್, ಅಂಚೆ ಇಲಾಖೆಯ ಜೀವನ್, ಜನಾರ್ದನ, ರಮೇಶ್, ಸಂದೇಶ, ವಿಜಯ ಮರಕಾಲ, ಬೆಳ್ವೆ ಅಂಚೆ ಕಚೇರಿಯ ಪ್ರಕಾಶ್ ಕುಮಾರ್ ಶೆಟ್ಟಿ ಸಹಕರಿಸಿದರು. ಈ ಸಂದರ್ಭದಲ್ಲಿ ಅಂಚೆ ಕಚೇರಿಯ ಸಾರ್ವಜನಿಕ ಭವಿಷ್ಯ ನಿಧಿ, ಸುಕನ್ಯಾ ಸಮೃದ್ಧಿ ಖಾತೆ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ನ ಖಾತೆ ಬಗ್ಗೆ ಮಾಹಿತಿ ನೀಡಲಾಯಿತು. ಶಿಬಿರ ದಲ್ಲಿ 797 ಜನ ಆಧಾರ್ ನೋಂದಣಿ ಹಾಗೂ ತಿದ್ದುಪಡಿಯ ಪ್ರಯೋಜನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News