×
Ad

ಸ್ವಚ್ಛ ಸೋಲಾರ್ ಹಸಿರು ಮನೆಗಳ ಪರಿವರ್ತನೆಗೆ ಸಂಕಲ್ಪ

Update: 2020-01-07 18:49 IST

ಮುಡಿಪು, ಜ.7: ಪ್ಲಾಸ್ಟಿಕ್ ಮತ್ತಿತರ ಘನ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಸುಡದೆ, ಮನೆಯಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಿಟ್ಟು ಸಮರ್ಪಕವಾಗಿ ನಿರ್ವಹಿಸಿ, ಮನೆಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸಿ ಮನೆಗಳ ವಠಾರದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿ ಸಂಪೂರ್ಣ ಸ್ವಚ್ಛ, ಸೋಲಾರ್, ಹಸಿರು ಮನೆಗಳ ಪರಿವರ್ತನೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟ ಬಾಳೆಪುಣಿ ಇದರ ಸದಸ್ಯರು ಸಂಕಲ್ಪಿಸಿದ್ದಾರೆ.

ಕಣಂತೂರು ಶ್ರೀ ವೈದ್ಯನಾಥ ಕಲಾ ಮಂಟಪದಲ್ಲಿ ಒಕ್ಕೂಟದ ಅಧ್ಯಕ್ಷ ರವೀಂದ್ರರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಒಕ್ಕೂಟದ ಸಭೆಯಲ್ಲಿ ‘ಸ್ವಚ್ಛ ಸೋಲಾರ್ ಹಸಿರು ಗ್ರಾಮ ಸಂವಾದ ಸಂಕಲ್ಪ’ ಕಾರ್ಯಕ್ರಮವನ್ನು ಸೋಲಾರ್ ದೀಪ ಬೆಳಗಿಸಿ ಉದ್ಘಾಟಿಸಸಿದರು.

ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಸೌರ ಶಕ್ತಿಯು ವಾಯುಮಾಲಿನ್ಯ ತಡೆದು ಬಿಸಿಲಿನ ತಾಪ ಇಳಿಸಿ ವಾಯುವಿನ ಶುದ್ಧತೆಗೆ ಮನೆ ವಠಾರದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವ ಬಗ್ಗೆ ಮಾಹಿತಿ ನೀಡಿದರು.

ಜನ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ, ಸೆಲ್ಕೋ ಸಂಸ್ಥೆಯ ಮ್ಯಾನೇಜರ್ ರವೀನಾ ಸಂವಾದದಲ್ಲಿ ಭಾಗವಹಿಸಿದರು. ಮುಡಿಪು ವಲಯ ಅಧ್ಯಕ್ಷ ನವೀನ್ ಪಾದಾಲ್ಪಾಡಿ, ಮೇಲ್ವಿಚಾರಕಿ ಮೋನಿ, ಸೇವಾನಿರತೆ ಮಮತಾ, ಒಕ್ಕೂಟದ ಉಪಾಧ್ಯಕ್ಷ ನಾಗೇಶ್, ಕಾರ್ಯದರ್ಶಿ ಜಯಶ್ರೀ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News