×
Ad

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್‌ನಿಂದ ಅಪಪ್ರಚಾರ: ನಳಿನ್ ಕುಮಾರ್

Update: 2020-01-07 19:01 IST

ಮಂಗಳೂರು, ಜ.7: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಕಾಂಗ್ರೆಸ್ ಅಪಪ್ರಚಾರ ಮಾಡಿ ಮತೀಯವಾದ ಎಬ್ಬಿಸಿ ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವುದು ಮಾತ್ರವಲ್ಲದೆ, ಪೌರತ್ವದ ಪರವಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಅವಮಾನ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.

ಪೌರತ್ವ ತಿದ್ದುಪಡಿ ಪರವಾದ ಸಹಿ, ಪೋಸ್ಟ್‌ಕಾರ್ಡ್ ಅಭಿಯಾನಕ್ಕೆ ಸುರತ್ಕಲ್‌ನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಸ್ವಾಂತತ್ರ್ಯದ ಬಳಿಕ ಪಾಕಿಸ್ತಾನ ಸಂಪೂರ್ಣ ಇಸ್ಲಾಮಿಕರಣಕ್ಕೆ ಒಳಗಾದ ಬಳಿಕ ಆದೇಶದಲ್ಲಿದ್ದ ಅಲ್ಪಸಂಖ್ಯಾತ ಹಿಂದೂಗಳು ತುಳಿತಕ್ಕೊಳಗಾದಾಗ ರಾಷ್ಟ್ರಪಿತ ಮಹಾತ್ಮಗಾಂಧಿ ಅವರು ನಮ್ಮದೇಶದ ಪ್ರಜೆಗಳಂತೆ ಕಾಣಬೇಕು ಎಂದಿದ್ದರು. ಬಳಿಕ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಬಾಂಗ್ಲಾ ನಿರಾಶ್ರಿತರಿಗೆ ಪೌರತ್ವ ಕೊಟ್ಟಿದ್ದಾರೆ. ಅಟಲ್ ಸರಕಾರವಿದ್ದಾಗ ಮಾಜಿ ಪ್ರಧಾನ ಮನ್‌ಮೋಹನ್ ಸಿಂಗ್ ಅವರು ಲೋಕಸಭೆಯಲ್ಲಿ ಪ್ರಶ್ನೆ ಮಂಡನೆ ಮಾಡಿ ಸರಕಾರದ ಪೌರತ್ವದ ನಿರ್ಧಾರವನ್ನು ಶ್ಲಾಘಿಸಿದ್ದರು ಎಂದು ಅವರು ಹೇಳಿದರು.

ಪೌರತ್ವ ತಿದ್ದುಪಡಿಯಿಂದ ಪಾಕಿಸ್ತಾನ, ಬಾಂಗ್ಲಾ, ಅಪ್ಘಾನಿಸ್ತಾನದಿಂದ ನಿರಾಶ್ರಿತರಾಗಿ ಬಂದವರಿಗೆ ರಕ್ಷಣೆ ಕೊಡುವ ಕೆಲಸ. ದೇಶದ ಅಲ್ಪಸಂಖ್ಯಾತರ ಹಕ್ಕನ್ನು ಕಸಿದುಕೊಳ್ಳುವ ಕೆಲಸವನ್ನು ಸರಕಾರ ಮಾಡುವುದಿಲ್ಲ. ರಕ್ಷಣೆ ನೀಡುವ ಜವಾಬ್ದಾರಿ ಸರಕಾರದ್ದಾಗಿದೆ. 1947ರಲ್ಲಿ ಶೇ 23ರಷ್ಟು ಅಲ್ಪಸಂಖ್ಯಾತರಿದ್ದರು.ಭಾರತದಲ್ಲಿ ಶೇ 3ರಷ್ಟು ಅಲ್ಪಸಂಖ್ಯಾತರಿದ್ದರು. ಇದೀಗ ಪಾಕ್‌ನಲ್ಲಿ ಒಂದೂವರೆ ಶೇಕಡ ಹಾಗೂ ದೇಶದಲ್ಲಿ ಶೇಕಡಾ 17.5 ಅಲ್ಪಸಂಖ್ಯಾತರಿದ್ದಾರೆ. ಸಿಎಎ ಕಾಯ್ದೆಯಲ್ಲಿ ಯಾರಿಗೂ ಅನ್ಯಾಯವಿಲ್ಲ ಎಂದವರು ಹೇಳಿದರು.

ದ.ಕ ಜಿಲ್ಲೆಯ ಜನತೆ ಪ್ರಧಾನಿ, ಗೃಹಸಚಿವರ ಜತೆಗಿದ್ದಾರೆ ಎಂಬ ಸಂದೇಶದ ಸಹಿ ಅಭಿಯಾನ ಸುರತ್ಕಲ್‌ನಿಂದ ಶಾಸಕ ಡಾ.ಭರತ್ ಶೆಟ್ಟಿ ವೈ ನೇತೃತ್ವದಲ್ಲಿ ಆರಂಭವಾಗಿದೆ. ಇದು ರಾಜ್ಯದಾದ್ಯಂತ ನಡೆಯಲಿದೆ ಎಂದು ಅವರು ಘೋಷಿಸಿದರು. ಈ ಸಂದರ್ಭ ಸಾಂಕೇತಿಕವಾಗಿ ಜನತೆಗೆ ಪೋಸ್ಟ್‌ಕಾರ್ಡ್ ನೀಡುವ ಮೂಲಕ ಪೋಸ್ಟ್‌ಕಾರ್ಡ್ ಚಳುವಳಿ ಆರಂಭಿಸಲಾಯಿತು.

ಅಲ್ಪಸಂಖ್ಯಾತರು ಹೆದರುವ ಅಗತ್ಯವಿಲ್ಲ

ಉಡುಪಿ ಪ್ರವಾಸದಲ್ಲಿದ್ದ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಹಿ ಸಂಗ್ರಹದಲ್ಲಿ ಭಾಗಿಯಾಗಿ ಸಿಎಎ ಬಗ್ಗೆ ತಪ್ಪು ಕಲ್ಪನೆ ಹುಟ್ಟು ಹಾಕುವ ಕೆಲಸ ಆಗುತ್ತಿದೆ. ತುಳಿತಕ್ಕೆ ,ಅವಮಾನಕ್ಕೆ ಒಳಗಾದವರು ಈ ದೇಶದಲ್ಲಿದ್ದರೂ ಇದುವರೆಗೂ ಒಂದೇ ಒಂದು ಸೌಲಭ್ಯವಿಲ್ಲದೆ ಬದುಕುತ್ತಿದ್ದಾರೆ.ಅವರಿಗೆ ಭವಿಷ್ಯ ನೀಡುವ ಕರ್ತವ್ಯವನ್ನು ಪ್ರಧಾನಿ,ಗೃಹಸಚಿವರು ಮಾಡುತ್ತಿದ್ದಾರೆ. ಸಂವಿಧಾನ ಬದ್ದವಾಗಿ ಮಾಡಿದ್ದರೂ ವಿರೋಧ ಪಕ್ಷ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.

ಶಾಸಕ ಡಾ.ಭರತ್ ಶೆಟ್ಟಿ ವೈ, ಸುರತ್ಕಲ್ ನಗರ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ,ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾ ಕಾರ್ಯದರ್ಶಿ ಕಿಶೋರ್ ರೈ, ಪೂಜಾ ಪೈ, ಬಿಜೆಪಿ ಪದಾಧಿಕಾರಿಗಳು, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News