×
Ad

ನಮಗೆ ಯಾವತ್ತೂ ಬೆದರಿಕೆ ಹಾಕಬೇಡಿ: ಇರಾನ್ ಅಧ್ಯಕ್ಷರಿಂದ ಅಮೆರಿಕ ಅಧ್ಯಕ್ಷರಿಗೆ ಎಚ್ಚರಿಕೆ

Update: 2020-01-07 22:02 IST
ಫೈಲ್ ಚಿತ್ರ

 ಟೆಹರಾನ್, ಜ. 7: ಇರಾನ್ ರಾಷ್ಟ್ರಕ್ಕೆ ಯಾವತ್ತೂ ಬೆದರಿಕೆ ಹಾಕಬೇಡಿ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ.

ಇರಾನ್ ಸೇನಾಧಿಕಾರಿ ಕಾಸಿಮ್ ಸುಲೈಮಾನಿ ಹತ್ಯೆಗೆ ಪ್ರತಿಯಾಗಿ, ಇರಾನ್ ಅಮೆರಿಕದ ಸಿಬ್ಬಂದಿ ಮತ್ತು ಸೊತ್ತುಗಳ ಮೇಲೆ ದಾಳಿ ನಡೆಸಿದರೆ, ಅಮೆರಿಕವು ಇರಾನ್‌ನ 52 ಸ್ಥಳಗಳ ಮೇಲೆ ಹಿಂದೆಂದೂ ಕಂಡಿರದಷ್ಟು ಭೀಕರವಾಗಿ ಪ್ರತಿ ದಾಳಿ ನಡೆಸುವುದು ಎಂಬ ಟ್ರಂಪ್ ಬೆದರಿಕೆಗೆ ರೂಹಾನಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಸಂಖ್ಯೆ 52, 1979ರಲ್ಲಿ ನಡೆದ ಇರಾನ್ ಕ್ರಾಂತಿಯ ಸಂದರ್ಭದಲ್ಲಿ ಟೆಹರಾನ್‌ನಲ್ಲಿನ ಅಮೆರಿಕ ರಾಯಭಾರ ಕಚೇರಿಯ 52 ಸಿಬ್ಬಂದಿಯನ್ನು 444 ದಿನಗಳ ಕಾಲ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದನ್ನು ಉಲ್ಲೇಖಿಸುತ್ತದೆ ಎಂದು ಟ್ರಂಪ್ ಹೇಳಿದ್ದರು.

‘‘ಸಂಖ್ಯೆ 52ರ ಬಗ್ಗೆ ಹೇಳುವವರು ಸಂಖ್ಯೆ 290ನ್ನೂ ನೆನಪಿಸಬೇಕು. ----------#IR655''-------------ಎಂದು ರೂಹಾನಿ ಟ್ವೀಟ್ ಮಾಡಿದ್ದಾರೆ. 1988ರಲ್ಲಿ ಅಮೆರಿಕದ ಯುದ್ಧನೌಕೆಯೊಂದು ಇರಾನಿಯನ್ ಏರ್‌ಲೈನ್‌ನ ವಿಮಾನವೊಂದನ್ನು ಹೊಡೆದುರುಳಿಸಿದ್ದು, ವಿಮಾನದಲ್ಲಿದ್ದ 290 ಮಂದಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News