ಇರಾನ್ ಯಾವತ್ತೂ ಪರಮಾಣು ಅಸ್ತ್ರ ಹೊಂದುವುದಿಲ್ಲ: ಟ್ರಂಪ್
Update: 2020-01-07 22:14 IST
ವಾಶಿಂಗ್ಟನ್, ಜ. 7: ಪರಮಾಣು ಶಸ್ತ್ರಗಳನ್ನು ಪಡೆಯಲು ಇರಾನ್‌ಗೆ ಅವಕಾಶ ನೀಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.
‘‘ಇರಾನ್ ಯಾವತ್ತೂ ಪರಮಾಣು ಅಸ್ತ್ರವೊಂದನ್ನು ಹೊಂದುವುದಿಲ್ಲ!’’ ಎಂಬುದಾಗಿ ಅಮೆರಿಕ ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ.
2015ರಲ್ಲಿ ಮುಂದುವರಿದ ದೇಶಗಳೊಂದಿಗೆ ಮಾಡಿಕೊಂಡ ಪರಮಾಣು ಒಪ್ಪಂದದ ಯಾವುದೇ ನಿರ್ಬಂಧಗಳನ್ನು ಇನ್ನು ತಾನು ಪಾಲಿಸುವುದಿಲ್ಲ ಎಂಬುದಾಗಿ ಇರಾನ್ ಘೋಷಿಸಿದ ಒಂದು ದಿನದ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
2015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರ ನೇತೃತ್ವದಲ್ಲಿ, ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ, ರಶ್ಯ ಮತ್ತು ಜರ್ಮನಿ ದೇಶಗಳೊಂದಿಗೆ ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿತ್ತು.
ಆದರೆ, 2018ರ ಮೇ ತಿಂಗಳಲ್ಲಿ ಟ್ರಂಪ್ ಒಪ್ಪಂದದಿಂದ ಅಮೆರಿಕವನ್ನು ಹೊರತಂದಿದ್ದಾರೆ.