×
Ad

ಬ್ರಾಹ್ಮಣ ಸಮ್ಮೇಳನದ ಪತ್ರಿಕಾಗೋಷ್ಠಿಯಲ್ಲಿ ಬಿಲ್ಲವರಿಗೆ ಅವಮಾನ ಆರೋಪ : ದೂರು

Update: 2020-01-07 22:27 IST

ಕುಂದಾಪುರ, ಜ.7: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನದ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ನೇರಂಬಳ್ಳಿ ರಾಘವೇಂದ್ರ ರಾವ್ ಸಾರ್ವ ಜನಿಕವಾಗಿ ಬಿಲ್ಲವರನ್ನು ಕೀಳುಮಟ್ಟದ ಪದ ಬಳಸಿ ಬಿಲ್ಲವ ಸಮಾಜವನ್ನು ಅವಹೇಳನ ಮಾಡಿರು ವುದಾಗಿ ಕಿರಣ್ ಪೂಜಾರಿ ಎಂಬವರು ಕುಂದಾಪುರ ಪೊಲೀಸ್ ಠಾಣೆಗೆ ಜ.1ರಂದು ದೂರು ನೀಡಿದ್ದಾರೆ.

ಡಿ.17ರಂದು ಕೋಟೇಶ್ವರದಲ್ಲಿ ಕರೆದ 10ನೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ ಕುರಿತ ಪತ್ರಿಕಾಗೋಷ್ಠಿಯಲ್ಲಿ ಕುಂದಾಪುರ ನಂದಿನಿ ಗ್ರೂಪ್ ಆಫ್ ಹೊಟೇಲಿನ ಮಾಲಕ ನೇರಂಬಳ್ಳಿ ರಾಘವೇಂದ್ರ ರಾವ್ ಬಿಲ್ಲವರನ್ನು ಅವಮಾನಿಸುವ ದುರುದ್ದೇಶದಿಂದ, ‘ನಮ್ಮ ಭಾಗದಲ್ಲಿ ಹೊಟೇಲ್ ಉದ್ಯಮ ಮೇಜರ್ ಉದ್ಯಮ, ಇಡೀ ಬೆಂಗಳೂರಿನಲ್ಲಿ ಕುಂದಾಪುರದವರೇ ಡಾಮಿ ನೇಟ್. ಗಾಣಿಗರು, ಪೂಜಾರ್, ಹಳೆಪೈದ ಇರಬಹುದು. ನಾವು ಬ್ರಾಹ್ಮಣ ಇರಬಹುದು. ಆದರೆ ಇವತ್ತು ಬ್ರಾಹ್ಮಣರನ್ನೆಲ್ಲ ರುಬ್ಬು ಕಲ್ಲಿಗೆ ಹಾಕಿ ರುಬ್ಬುತ್ತಾ ಇದ್ದಾರೆ. ಹೊಟೇಲ್‌ನಲ್ಲಿ ಬ್ರಾಹ್ಮಣರು ಹಿಂದೆ ಹೋಗಿ ಆಯಿತು. ಮುಂದಕ್ಕೆ ಬೇರೆ ಜಾತಿಯವರು ಹೋಗಿ ಆಗಿದೆ’ ಎಂದು ಕೀಳುಮಟ್ಟದಲ್ಲಿ ಸಾರ್ವಜನಿಕ ವಾಗಿ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿ ದಾಡಿ ನಮ್ಮ ಬಿಲ್ಲವ ಸಮಾಜವೇ ತಲೆತಗ್ಗಿಸುವಂತೆ ಮಾಡಿದ್ದಾರೆ. ಬಿಲ್ಲವರನ್ನು ಸಾರ್ವಜನಿಕವಾಗಿ ಈ ರೀತಿ ಕೀಳುಮಟ್ಟದ ಪದ ಪ್ರಯೋಗ ಮಾಡಿ ನಿಂದಿಸಿ ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ನೇರಂಬಳ್ಳಿ ರಾಘವೇಂದ್ರ ರಾವ್ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಇದನ್ನು ಮನವಿಯಾಗಿ ಪರಿಗಣಿಸಿರುವ ಕುಂದಾಪುರ ಪೊಲೀಸರು, ಈ ಬಗ್ಗೆ ಹಿಂಬರಹ ನೀಡಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವಿಚಾರದಲ್ಲಿ ಕಿರಣ್ ಕುಮಾರ್ ದೂರು ಸಲ್ಲಿಸಿ ವಾರಗಳಾಗುತ್ತ ಬಂದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಜ.6ರಂದು ಕುಂದಾಪುರದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ತಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News