×
Ad

ಪೊಲೀಸರ ಒತ್ತಡದಿಂದಾಗಿ ಸುದ್ದಿಗೋಷ್ಠಿ ರದ್ದು: ಜನತಾ ನ್ಯಾಯಾಧೀಕರಣ

Update: 2020-01-07 22:39 IST

ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆ, ಸಿಎಎಯನ್ನು ವಿರೋಧಿಸಿ ಡಿ.19ರಂದು ಮಂಗಳೂರಿನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜನರಿಂದ ತನ್ನ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಮಂಗಳವಾರ ಅಂತ್ಯಗೊಳಿಸಿದ ನ್ಯಾಯಾಧೀಕರ ಣವು ಮಾಧ್ಯಮಗಳಿಗೆ ವಿವರಗಳನ್ನು ನಿಡಲು ಸುದ್ದಿಗೋಷ್ಠಿಯನ್ನು ಕರೆಯಲು ನಿರ್ಧರಿಸಿತ್ತು. ಆದರೆ ಪೊಲೀಸರ ಒತ್ತಡದಿಂದಾಗಿ ಅದು ಸಾಧ್ಯವಾಗಲಿಲ್ಲ ಈ ಹಿನ್ನೆಲೆಯಲ್ಲಿ ಉದ್ದೇಶಿತ ಸುದ್ದಿಗೋಷ್ಠಿಯನ್ನು ಕೈಬಿಟ್ಟಿದ್ದಾಗಿ ಜನತಾ ನ್ಯಾಯಾಧಿಕರಣದ ಹೇಳಿಕೆಯು ತಿಳಿಸಿದೆ.

ನ್ಯಾಯಾಧಿಕರಣದ ತಂಡವು ಸಂಪರ್ಕಿಸಿದ್ದ ಹೋಟೆಲ್‌ಗಳು ಪೊಲೀಸ್‌ಅಧಿಕಾರಿಗಳಿಂದ ಅನುಮತಿಯನ್ನು ಪಡೆದುಕೊಂಡಿದ್ದರೆ ಮಾತ್ರ ಸುದ್ದಿಗೋಷ್ಠಿಗೆ ಸ್ಥಳಾವಕಾಶವನ್ನು ಒದಗಿಸುವುದಾಗಿ ತಿಳಿಸಿದ್ದವು. ಕಾನೂನಿನಂತೆ ಯಾರೇ ಆದರೂ ಸುದ್ದಿಗೋಷ್ಠಿಯನ್ನು ನಡೆಸಲು ಪೊಲೀಸ್ ಅನುಮತಿಯ ಅಗತ್ಯವಿಲ್ಲ ಎಂದು ಅದು ತಿಳಿಸಿದೆ.

ಸೋಮವಾರವೂ ಪೊಲೀಸರು ಅಪರೋಕ್ಷವಾಗಿ ನ್ಯಾಯಾಧಿಕರಣದ ಕಲಾಪಗಳಿಗೆ ವ್ಯತ್ಯಯವನ್ನುಂಟು ಮಾಡಿದ್ದರು.

ಪೊಲೀಸ್ ಗೋಲಿಬಾರ್ ಕುರಿತು ಮ್ಯಾಜಿಸ್ಟೀರಿಯಲ್ ತನಿಖೆ ನಡೆಯುತ್ತಿರುವದರಿಂದ ಸಮಾನಾಂತರವಾಗಿ ಇನ್ನೊಂದು ತನಿಖೆಯನ್ನು ನಡೆಸುವಂತಿಲ್ಲ ಎಂದು ಬಂದರು ಠಾಣಾ ಪೊಲೀಸರು ನ್ಯಾಯಾಧಿಕರಣ ಕಲಾಪಗಳ ಸಂಘಟಕರಿಗೆ ನೋಟೀಸನ್ನೂ ಜಾರಿ ಮಾಡಿದ್ದರು. ಸೋಮವಾರ ನಗರದ ಸೂರ್ಯ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಕಲಾಪಗಳಿಗೆ ಒಂದು ಗಂಟೆ ಕಾಲ ಅಡ್ಡಿಯೂ ಆಗಿತ್ತು ಎಂದು ತಿಳಿಸಿರುವ ಹೇಳಿಕೆಯು,ಸಾರ್ವಜನಿಕರೆದುರು ಸತ್ಯ ಬಯಲಾಗದಂತೆ ನೋಡಿಕೊಳ್ಳುವುದು ಪೊಲಿಸರ ಪದೇಪದೇ ಹಸ್ತಕ್ಷೇಪಗಳ ಉದ್ದೇಶವಾಗಿತ್ತು ಎಂದು ಹೇಳಿದೆ.

ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ವಿ.ಗೋಪಾಲ ಗೌಡ ನೇತೃತ್ವದ ಜನತಾ ನ್ಯಾಯಾಧಿಕರಣದ ತಂಡವು ಮಂಗಳವಾರ ನಗರದ ಹೈಲ್ಯಾಂಡ್ ಮತ್ತು ಯೂನಿಟಿ ಆಸ್ಪತ್ರೆಗಳಿಗೆ ತೆರಳಿ ಡಿಸೆಂಬರ್ 19ರಂದು ನಡೆ ಗಲಭೆಯ ಸಂದರ್ಭದ ಗಾಯಾಳುಗಳನ್ನು ಭೇಟಿ ಮಾಡಿತು. ತಂಡವು ಡಿ.19ರಂದು ತೀವ್ರ ಗಲಭೆ ಪೀಡಿತವಾಗಿದ್ದ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News