×
Ad

ರೇಷನ್ ಕಾರ್ಡ್: ಇ-ಕೆವೈಸಿ ಪ್ರಕ್ರಿಯೆ ವಿಸ್ತರಣೆ

Update: 2020-01-07 23:05 IST

ಮಂಗಳೂರು, ಜ.7: ಪಡಿತರ ಚೀಟಿದಾರರ ಇ-ಕೆವೈಸಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಆಹಾರ ಮತ್ತು ನಗರಿಕ ಸರಬರಾಜು ಇಲಾಖೆಯ ಆಯುಕ್ತರ ಆದೇಶದಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿಯಲ್ಲಿನ ಎಲ್ಲ ಸದಸ್ಯರ ಇ-ಕೆವೈಸಿ ಪಡೆಯುವ ಪ್ರಕ್ರಿಯೆಯನ್ನು ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲಾಗಿದೆ.

ಯಾವುದೇ ಗೊಂದಲ, ದೂರುಗಳಿದ್ದಲ್ಲಿ ಸಂಬಂಧಪಟ್ಟ ತಾಲೂಕು ಕಚೇರಿಗಳಲ್ಲಿರುವ ಆಹಾರ ಶಿರಸ್ತೇದಾರ್/ಆಹಾರ ನಿರಿಕ್ಷಕರನ್ನು ಸಂಪರ್ಕಿಸಬಹುದು. ಮಂಗಳೂರು ಪ್ರದೇಶ ಸಹಾಯಕ ನಿರ್ದೇಶಕಿ ಕಸ್ತೂರಿ (9448819997), ಆಹಾರ ನಿರೀಕ್ಷಕಿ ಕಮಲ (9480241159), ಮಂಗಳೂರು ತಾಲೂಕು ಶಿರೆಸ್ತೇದಾರ್ ಮೋಹಿನಿಕುಮಾರಿ (9686243030), ಆಹಾರ ನಿರೀಕ್ಷಕಿ ರಾಜ್ಯಶ್ರೀ ಅಡ್ಯಂತಾಯರು (9482502247), ಬಂಟ್ವಾಳ ತಾಲೂಕು ಶಿರಸ್ತೇದಾರ್ ಶ್ರೀನಿವಾಸ್ (9480735215), ಪುತ್ತೂರು ತಾಲೂಕು ಆಹಾರ ನಿರೀಕ್ಷಕಿ ಸರಸ್ವತಿ (9449389715), ಬೆಳ್ತಂಗಡಿ ತಾಲೂಕು ಆಹಾರ ನಿರೀಕ್ಷಕ ವಿಶ್ವ ಕೆ. (8762698174), ಸುಳ್ಯ ತಾಲೂಕು ಆಹಾರ ನಿರೀಕ್ಷಕಿ ವಸಂತಿ ಕೆ. (9845466149) ಅವರನ್ನು ಸಂಪರ್ಕಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News