ಬಿಐಟಿ - ಬೀಡ್ಸ್ ವತಿಯಿಂದ ವೃತ್ತಿಪರ ಕೋರ್ಸುಗಳ ಮಾರ್ಗದರ್ಶನ ಕಾರ್ಯಾಗಾರ
Update: 2020-01-08 12:15 IST
ಬಂಟ್ವಾಳ, ಜ.8: ಬಿಐಟಿ ಮತ್ತು ಬೀಡ್ಸ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಸಿಇಟಿ ಅಣಕು ಪರೀಕ್ಷೆ ಹಾಗೂ ವೃತ್ತಿಪರ ಕೋರ್ಸುಗಳ ಮಾರ್ಗದರ್ಶನ ಕಾರ್ಯಾಗಾರವು ಮಿತ್ತೂರಿನ ಖ್ವಾಜಾ ಗರೀಬ್ ನವಾಝ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮದಲ್ಲಿ ಸಿಇಟಿ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸವಿವರವಾಗಿ ವಿವರಿಸಲಾಯಿತು ನಂತರ ಸಿಇಟಿ ಅಣಕು ಪರೀಕ್ಷೆ ನಡೆಸಲಾಯಿತು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಬಿಐಟಿ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ.ಮುಸ್ತಫಾ ಖಲೀಲ್, ಪ್ರೊ.ಅಬೂಬಕರ್ ಶಮೀಝ್ ಹಾಗೂ ಪ್ರೊ. ಇಮ್ರಾನ್ ಅಹ್ಮದ್ ನಡೆಸಿಕೊಟ್ಟರು.
ವಿಜೇತ ವಿದ್ಯಾರ್ಥಿಗಳಾದ ಮುಹಮ್ಮದ್ ರಾಫಿ ಹಾಗೂ ಮುಹಮ್ಮದ್ ಶಮ್ಮಾಸ್ ಅವರಿಗೆ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೆ.ಜಿ.ಎನ್ ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಇಸ್ತಿಕಾರ್ ಹಾಗೂ ಪ್ರಾಧ್ಯಾಪಕ ಯತೀಶ್ ಉಪಸ್ಥಿತರಿದ್ದರು.