ಕೊಳೆಗೇರಿಯ ನಿವಾಸಿಗಳ ಆದಾಯ ಮಿತಿ 3 ಲಕ್ಷ ರೂ.ಗೆ ಏರಿಕೆ

Update: 2020-01-08 14:47 GMT

ಮಣಿಪಾಲ, ಜ.8: ರಾಜ್ಯದ ಕೊಳಗೇರಿಗಳಲ್ಲಿ ವಾಸವಾಗಿದ್ದು ಸ್ವಂತ ವಸತಿ ಹೊಂದಲು ಈಗಿರುವ ಆದಾಯ ಮಿತಿಯನ್ನು 75,000 ರೂ.ಗಳಿಂದ ಮೂರು ಲಕ್ಷ ರೂ.ಗಳಿಗೆ ಏರಿಸಲು ಸರಕಾರ ನಿರ್ಧರಿಸಿದ್ದು, ಈ ಮೂಲಕ ಕೊಳಗೇರಿಗಳನ್ನು ಸೂರು ರಹಿತ ಪ್ರದೇಶವಾಗಿ ಮಾಡಲು ಸಾಧ್ಯವಾಗಲಿದೆ ಎಂದು ರಾಜ್ಯ ವಸತಿ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಬುಧವಾರ ಉಡುಪಿ ನಗರಸಭಾ ವ್ಯಾಪ್ತಿಯ ಹೆರ್ಗಾ ಗ್ರಾಮದ ಬಬ್ಬುಸ್ವಾಮಿ ಲೇಔಟ್‌ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರು (ನಗರ)(ಜಿ+3) ಮಾದರಿಯ 460 ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತಿದ್ದರು.

ರಾಜ್ಯದಲ್ಲಿ ಒಟ್ಟು 53 ಹಾಗೂ ಉಡುಪಿ ಜಿಲ್ಲೆಯಲ್ಲಿ 17 (ಉಡುಪಿಯಲ್ಲಿ 8, ಕಾರ್ಕಳದಲ್ಲಿ 9) ಕೊಳಗೇರಿಗಳನ್ನು ಗುರುತಿಸಲಾ ಗಿದೆ. ಕೊಳೆಗೇರಿಯ ವಸತಿ ಯೋಜನೆಗೆ ಈ ಹಿಂದೆ ಇದ್ದ ಆದಾಯದ ಮಿತಿಯನ್ನು 75000 ರೂ. ಗಳಿಂದ 3 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಅಲ್ಲಿನ ಎಲ್ಲರೂ ವಸತಿ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ. ಈಗಾಗಲೇ 46,000 ಮನೆಗಳ ನಿರ್ಮಾಣ ವಾಗಿದೆ. ಈ ಮೂಲಕ ಕೊಳಗೇರಿ ನಿರ್ಮೂಲನದ ಕನಸು ನನಸಾಲಿದೆ ಎಂದು ಸಚಿವರು ನುಡಿದರು.

ರಾಜ್ಯದಲ್ಲಿ 2 ವರ್ಷಗಳ ಕಾಲಮಿತಿಯಲ್ಲಿ 4 ಲಕ್ಷ ಬಡವರಿಗೆ ಮನೆ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಈ ಮೂಲಕ ರಾಜ್ಯದ ಯಾವುದೇ ಕುಟುಂಬ ವಸತಿ ರಹಿತವಾಗದಂತೆ ಪ್ರತಿಯೊಬ್ಬರಿಗೂ ಸೂರು ಒದಗಿಸಲು ಯಡಿಯೂರಪ್ಪ ಸರಕಾರ ಬದ್ದವಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ 2 ವರ್ಷಗಳ ಕಾಲಮಿತಿಯಲ್ಲಿ 4 ಲಕ್ಷ ಬಡವರಿಗೆ ಮನೆ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಈ ಮೂಲಕ ರಾಜ್ಯದ ಯಾವುದೇ ಕುಟುಂಬ ವಸತಿ ರಹಿತವಾಗದಂತೆ ಪ್ರತಿಯೊಬ್ಬರಿಗೂ ಸೂರು ಒದಗಿಸಲು ಯಡಿಯೂರಪ್ಪ ಸರಕಾರ ಬದ್ದವಾಗಿದೆ ಎಂದು ಅವರು ಹೇಳಿದರು. ಹಿಂದಿನ ಸರಕಾರ 1.80 ಲಕ್ಷ ಮನೆ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿ, ಟೆಂಡರ್ ಕರೆದು ಅಲ್ಲಿಗೆ ನಿಲ್ಲಿಸಲಾಗಿತ್ತು. ಆದರೆ ನಮ್ಮ ಸರಕಾರ ಈ ವರ್ಷ 43,000 ಮನೆಗಳನ್ನು ನಿರ್ಮಿಸಲು ಕ್ರಿಯಾ ಯೋಜನೆ ಸಿದ್ದಪಡಿ ಸಿದ್ದು, ಈಗಾಗಲೇ 39,000 ಮನೆಗಳ ನಿರ್ಮಾಣಕ್ಕೆ ಚಾಲನೆಯನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಹಿಂದಿನ ಸರಕಾರ 1.80 ಲಕ್ಷ ಮನೆ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿ, ಟೆಂಡರ್ ಕರೆದು ಅಲ್ಲಿಗೆ ನಿಲ್ಲಿಸಲಾಗಿತ್ತು. ಆದರೆ ನಮ್ಮ ಸರಕಾರ ಈ ವರ್ಷ 43,000 ಮನೆಗಳನ್ನು ನಿರ್ಮಿಸಲು ಕ್ರಿಯಾ ಯೋಜನೆ ಸಿದ್ದಪಡಿ ಸಿದ್ದು, ಈಗಾಗಲೇ 39,000 ಮನೆಗಳ ನಿರ್ಮಾಣಕ್ಕೆ ಚಾಲನೆಯನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ರಾಜೀವ್ ಗಾಂಧೀ ವಸತಿ ನಿಗಮದಿಂದ ವಸತಿ ಯೋಜನೆಯ ಫಲಾನುವಿಗಳಿಗೆ ಬಿಡುಗಡೆ ಮಾಡುತಿದ್ದ ಅನುದಾನವನ್ನು, ಇನ್ನು ಮುಂದೆ ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾಪಂಚಾಯತ್ ಸಿಇಓಗಳು ಮತ್ತು ನಗರ ಪ್ರದೇಶದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಬಿಡುಗಡೆ ಮಾಡಲು ತೀರ್ಮಾನಿ ಸಲಾಗಿದ್ದು, ರಾಜ್ಯವನ್ನು ವಸತಿ ರಹಿತ ಮುಕ್ತ ರಾಜ್ಯವನ್ನಾಗಿ ಮಾಡಲಾಗುವುದು ಎಂದು ಸಚಿವ ಸೋಮಣ್ಣ ಹೇಳಿದರು.

ಉಡುಪಿಯಲ್ಲಿ ಪ್ರಸ್ತುತ ನಿರ್ಮಾಣ ಮಾಡುತ್ತಿರುವ 460 ಮನೆಗಳ ನಿರ್ಮಾಣ ಕಾರ್ಯವನ್ನು, ಅಗತ್ಯ ಎಲ್ಲಾ ಮೂಲೂತ ಸೌಕರ್ಯಗಳೊಂದಿಗೆ ಇಲ್ಲಿನ ಗುರಿಯಾದ 1000 ಮನೆಗಳಿಗೆ ವಿಸ್ತರಿಸಿ, ಅಗತ್ಯ ಅನುದಾನ ಹಾಗೂ ಯೋಜನೆಗೆ ಅನುಮೋದನೆ ನೀಡಲಾಗುವುದು ಎಂದವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, 2022 ರ ವೇಳೆಗೆ ಸರ್ವರಿಗೂ ಸೂರು ದೊರೆಯಬೇಕು ಎಂಬ ಉದ್ದೇಶದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಯಾಗಿದ್ದು, ರಾಜ್ಯದಲ್ಲೂ ಅದನ್ನು ಯಶಸ್ವಿ ಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ಸ್ವಂತ ಮನೆ ಎನ್ನುವುದು ವ್ಯಕ್ತಿಯೊಬ್ಬನ ಆತ್ಮಗೌರವ ಹೆಚ್ಚಿಸಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ರಘುಪತಿ ಭಟ್, ಪ್ರಸ್ತುತ ಇಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನ ಜೊತೆಗೆ, ಉಡುಪಿ ನಗರಸಭೆಯಿಂದ ಮನೆ ನಿರ್ಮಾಣದ ಒಟ್ಟು ವೆಚ್ಚದ ಶೇ.10ರ ಮೊತ್ತವನ್ನು ಭರಿಸಲಾಗುತಿದ್ದು, ಉಳಿದ ಮೊತ್ತಕ್ಕೆ ಬ್ಯಾಂಕ್ ಆಪ್ ಬರೋಡಾ ಮೂಲಕ ಅತ್ಯಂತ ಕಡಿಮೆ ಬಡ್ಡಿದರದಲ್ಲಿ 30 ವರ್ಷಗಳ ಅವಧಿಗೆ ಫಲಾನುವಿಗಳಿಗೆ ಸಾಲದ ವ್ಯವಸ್ಥೆ ಮಾಡಲಾಗಿದೆ. 2021ರ ಮೇ ಒಳಗೆ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದೆ ಶೋಬಾ ಕರಂದ್ಲಾಜೆ, ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸ್ಥಳೀಯ ನಗರಸಬಾ ಸದಸ್ಯೆ ವಿಜಯಲಕ್ಷ್ಮಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಕರ್ನಾಟಕ ಕೊಳೆಗೇರಿ ಅಭಿವೃದ್ದಿ ಮಂಡಳಿ ಆಯುಕ್ತ ಶಿವಪ್ರಸಾದ್, ಪೌರಾಯುಕ್ತ ಆನಂದ ಕಲ್ಲೋಳಿಕರ್, ಬ್ಯಾಂಕ್ ಆಪ್ ಬರೋಡಾದ ಪ್ರಾದೇಶಿಕ ಮೆನೇಜರ್ ರವೀಂದ್ರ ರೈ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ಕೊಳೆಗೇರಿ ಅಭಿವೃದ್ದಿ ಮಂಡಳಿಯ ತಾಂತ್ರಿಕ ಅಧಿಕಾರಿ ಬಾಲರಾಜ್ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News