ತೊಕ್ಕೊಟ್ಟಿನಲ್ಲಿ ಸಿಎಎ-ಎನ್ ಆರ್ ಸಿ ಪರ ಭಿತ್ತಿಪತ್ರ ಹಂಚಿಕೆ: ಬಿಜೆಪಿ ಕಾರ್ಯಕರ್ತರಿಗೆ ಅಂಗಡಿ ಮಾಲಕರ ತರಾಟೆ
Update: 2020-01-08 20:55 IST
ಉಳ್ಳಾಲ: ಸಿಎಎ-ಎನ್ ಆರ್ ಸಿ ಪರ ಭಿತ್ತಿಪತ್ರ ಹಂಚಲು ಮಂಗಳೂರು ಕ್ಷೇತ್ರ ಬಿಜೆಪಿ ಕಾರ್ಯಕರ್ತರು ತೊಕ್ಕೊಟ್ಟು ನಲ್ಲಿರುವ ಸ್ಮಾರ್ಟ್‍ಸಿಟಿಗೆ ತೆರಳಿದ ಸಂದರ್ಭ ಬಿತ್ತಿ ಪತ್ರ ಹಂಚುವ ವಿಚಾರದಲ್ಲಿ ಇತ್ತಂಡಗಳ ನಡುವೆ ವಾಗ್ವಾದ ನಡೆದು ಬಿಜೆಪಿ ಕಾರ್ಯಕರ್ತರನ್ನು ಅಂಗಡಿ ಮಾಲಕರು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.
ಬಿಜೆಪಿ ಮುಖಂಡರು ಬಿತ್ತಿ ಪತ್ರ ಹಂಚುವ ವೇಳೆ ತೊಕ್ಕೊಟ್ಟು ಸ್ಮಾರ್ಟ್ ಸಿಟಿ ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿ ಮಾಲಕರು ಆಕ್ರೋಶ ವ್ಯಕ್ತಪಡಿಸಿದಲ್ಲದೇ ಬಿಜೆಪಿಗೆ ಧಿಕ್ಕಾರ ಹಾಗೂ ಎನ್ ಆರ್ ಸಿ , ಸಿ ಎಎ ಗೋಬ್ಯಾಕ್ ಎಂದು ಘೋಷಣೆ ಕೂಗಿ ಭಿತ್ತಿ ಪತ್ರ ವಿತರಣೆಗೆ ಅವಕಾಶ ನೀಡದೆ ವಾಪಸ್ ಕಳುಹಿಸಿದರು. ಈ ಸಂದರ್ಭ ಬಿಜೆಪಿ ಕಾರ್ಯರ್ತರ ಮತ್ತು ಅಂಗಡಿ ಮಾಲಕರ ನಡುವೆ ಮಾತಿನ ಚಕಮಕಿ ನಡೆಯಿತು. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿ ಉಳ್ಳಾಲ ಮತ್ತು ಕೆಎಸ್ ಆರ್ ಪಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.