ಜುಗಾರಿ: ಮೂವರ ಬಂಧನ

Update: 2020-01-08 16:36 GMT

ಕಾರ್ಕಳ, ಜ. 8: ಕಾರ್ಕಳ ಪತ್ತೋಂಜಿಕಟ್ಟೆ ಬಳಿಯ ಹಾಡಿಯಲ್ಲಿ ಜ.7ರಂದು ಇಸ್ಪೀಟ್ ಜುಗಾರಿ ಆಡುತ್ತಿದ್ದ ಮೊಹಮ್ಮದ್, ಫಾರೂಕ್, ಮಂಜುನಾಥ ಎಂಬವರನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.

ನವೀದ್ ಬಂಗ್ಲೆಗುಡ್ಡೆ, ಆಸೀಫ್ ಗುಂಡ್ಯಡ್ಕ ಎಂಬವರು ಪೊಲೀಸ್ ದಾಳಿ ವೇಳೆ ಪರಾರಿಯಾಗಿದ್ದಾರೆ. ಬಂಧಿತರಿಂದ 2330 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News