ಅಲ್ ಮದೀನಾದ ‘ಗುಲ್ಶನ್’ಕಾರ್ಯಕ್ರಮಕ್ಕೆ ಚಾಲನೆ

Update: 2020-01-08 16:44 GMT

ಮಂಜನಾಡಿ, ಜ.7: ಅಲ್ ಮದೀನಾ ದಅವಾ ಕಾಲೇಜ್ ವಿದ್ಯಾರ್ಥಿಗಳ ‘ಗುಲ್ಶನ್’ ಕಲಾ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನ್ಯಾಯವಾದಿ, ಚಿಂತಕ ಪುನೀತ್ ಅಪ್ಪು ಮಾತನಾಡಿ ಸರ್ವಧರ್ಮ ಗ್ರಂಥಗಳು ಭಾರತೀಯ ಸಂವಿಧಾನದ ಅಡಿಪಾಯವಾಗಿದೆ. ಧರ್ಮಗ್ರಂಥಗಳ ಅಧ್ಯಯನ ಪ್ರತಿಯೊಬ್ಬ ಭಾರತೀಯರಿಗೂ ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. ಪತ್ರಕರ್ತ ಹಂಝ ಮಲಾರ್ ಮಾತನಾಡಿದರು. ದಅವಾ ಕಾಲೇಜಿನ ಪ್ರಾಂಶುಪಾಲ ಸಲಾಂ ಅಹ್ಸನಿ ಉದ್ಘಾಟಿಸಿದರು. ಅಬ್ದುಲ್ ರಝಾಕ್ ಮಾಸ್ಷರ್, ಅಬ್ದುಲ್ ಅಝೀಝ್ ಅಹ್ಸನಿ, ಅಬ್ದುರ್ರಹ್ಮಾನ್ ಅಹ್ಸನಿ, ಅಶ್ರಫ್ ಸಖಾಫಿ, ಮುನೀರ್ ಅಹ್ಮದ್ ಸಖಾಫಿ, ಮುಹಮ್ಮದ್ ಕುಂಞಿ ಅಮ್ಜದಿ, ಇರ್ಫಾನ್ ಅಬ್ದುಲ್ಲಾ ನೂರಾನಿ, ಕನ್ವೀನರುಗಳಾದ ಅಶ್ರಫ್, ರಫೀಕ್, ಹೈದರ್ ಮತ್ತಿತರರು ಉಪಸ್ಥಿತರಿದ್ದರು.

ಬಿಶಾರತುಲ್ ಮದೀನಾ ಅಧ್ಯಕ್ಷ ನಿಝಾರ್ ಸ್ವಾಗತಿಸಿದರು. ಅಬ್ದುಲ್ ಸಮದ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನೌಶಾದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News