ಯಾವುದೇ ಸಾವುನೋವು ಸಂಭವಿಸಿಲ್ಲ:ಟ್ರಂಪ್

Update: 2020-01-08 17:55 GMT

ವಾಷಿಂಗ್ಟನ್,ಜ.8: ಇರಾಕ್‌ನಲ್ಲಿಯ ಅಮೆರಿಕದ ಸೇನಾನೆಲೆಗಳ ಮೇಲೆ ತಾನು ನಡೆಸಿದ ಕ್ಷಿಪಣಿ ದಾಳಿಗಳಲ್ಲಿ 80 ಅಮೆರಿಕನ್ ಸೈನಿಕರು ಮೃತಪಟ್ಟಿದ್ದಾರೆ ಎಂಬ ಇರಾನಿನ ಹೇಳಿಕೆಗಳನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಅಲ್ಲಗಳೆದಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ನಮ್ಮ ಕಡೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ,ನಮ್ಮ ಸೇನಾನೆಲೆಗಳಿಗೆ ಕನಿಷ್ಠ ಹಾನಿಯಾಗಿದೆ ಎಂದು ತಿಳಿಸಿದರು.

ಇರಾನ್ ಹಿಮ್ಮೆಟ್ಟಿರುವಂತೆ ಕಾಣುತ್ತಿದೆ ಎಂದ ಅವರು,ಅದು ಅಣ್ವಸ್ತ್ರಗಳನ್ನು ಹೊಂದಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದರು. ಇರಾನ್ ತನ್ನ ವರ್ತನೆಯನ್ನು ಬದಲಿಸಿಕೊಳ್ಳದಿದ್ದರೆ ಅದರ ವಿರುದ್ಧ ಇನ್ನಷ್ಟು ಕಠಿಣ ನಿರ್ಬಂಧಗಳನ್ನು ಹೇರಲಾಗುವುದು ಎಂದೂ ಟ್ರಂಪ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News