ಮತದಾರರ ಮಿಂಚಿನ ನೋಂದಣಿ ಆಂದೋಲನ ವಿಸ್ತರಣೆ
Update: 2020-01-09 20:00 IST
ಉಡುಪಿ, ಜ.9: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಉಡುಪಿ ಜಿಲ್ಲಾದ್ಯಂತ ಮತದಾರರ ಮಿಂಚಿನ ನೋಂದಣಿ ಆಂದೋಲನ ಕಾರ್ಯಕ್ರಮವನ್ನು ಜ.10ರವರೆಗೆ ವಿಸ್ತರಿಸಲಾಗಿದೆ.
ಆದ್ದರಿಂದ ಜಿಲ್ಲೆಯ ಮತದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಹಾಗೂ ತಿದ್ದುಪಡಿ, ವರ್ಗಾವಣೆ ಹಾಗೂ ವಿಳಾಸ ಬದಲಾವಣೆ ಮಾಡಲು ತಮ್ಮ ಹತ್ತಿರದ ಬಿಎಲ್‌ಓ ಕಚೇರಿಯಲ್ಲಿ ಜ.10ರಿಂದ ಪ್ರಾರಂಭಿಸಿ ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.