×
Ad

ಮಲ್ಪೆ ಮೀನುಗಾರರಿಂದ ಪೇಜಾವರ ಶ್ರೀಗೆ ನುಡಿನಮನ

Update: 2020-01-09 20:05 IST

ಮಲ್ಪೆ, ಜ.9: ಮಲ್ಪೆ ಮೀನುಗಾರರ ಸಂಘದ ವತಿಯಿಂದ ಇತ್ತೀಚೆಗೆ ವಿಧಿ ವಶರಾದ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿಗೆ ಇಂದು ನುಡಿ ನಮನ ಸಲ್ಲಿಸಲಾಯಿತು.

ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್.ಸುವರ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮೀನುಗಾರರ ಸಂಘದ ಉಪಾಧ್ಯಕ್ಷ ರಮೇಶ್ ಕೋಟ್ಯಾನ್, ನಾಗರಾಜ ಕುಂದರ್, ಸಾಧು ಸಾಲ್ಯಾನ್, ಶಿವಪ್ಪಕಾಂಚನ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಕೆ.ಗಣೇಶ್, ಸಹಾಯಕ ನಿರ್ದೇಶಕ ಶಿವ ಕುಮಾರ್, ದಯಾನಂದ ಸುವರ್ಣ, ಸತೀಶ್ ಕುಂದರ್, ಸುಭಾಸ್ ಬೆಂಗ್ರೆ, ಬೇಬಿ ಎಚ್.ಸಾಲ್ಯಾನ್, ಜಲಜ ಕೋಟ್ಯಾನ್ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News