ಜ.10ರಂದು ಚಂದ್ರಗ್ರಹಣ ವೀಕ್ಷಣೆ
Update: 2020-01-09 20:27 IST
ಉಡುಪಿ, ಜ.9: ಪರ್ಕಳ ಗ್ಯಾಟ್‌ಸನ್ ಸರ್ಕಲ್ ಬಳಿ ಜ.10ರ ರಾತ್ರಿ 10:15ರಿಂದ ಮಣಿಪಾಲದ ಆರ್.ಮನೋಹರ್ ಆವಿಷ್ಕಾರ ಮಾಡಿದ ಟೆಲಿ ಸ್ಕೋಪ್ ಮೂಲಕ ಹಾಗೂ ಸರಳೆಬೆಟ್ಟುವಿನ ಸುಹಾಸ್ ಶೆಣೈ ಕ್ಯಾಮರಾದಿಂದ ಸೆರೆಹಿಡಿದು ಲ್ಯಾಪ್‌ಟಾಪ್ ಮೂಲಕ ಬಾನಂಗಳದಲ್ಲಿ ನಡೆಯುವ ತಾಂಬ್ರ ಬಣ್ಣದ ಚಂದ್ರಗ್ರಹಣವನ್ನು ನೇರವಾಗಿ ವೀಕ್ಷಿಸಿಸಬಹುದಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ಗಣೇಶ್‌ರಾಜ್ ಸರಳೇಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.