ಕಲಾವಿದ ಸ್ವಪನ್ ಚೌಧರಿಯಿಂದ ಸಂಗೀತ ಕಾರ್ಯಕ್ರಮ
Update: 2020-01-09 20:29 IST
ಮಣಿಪಾಲ, ಜ.9: ಮಣಿಪಾಲ ಸಂಗೀತ ಸಭಾ ಇದರ ಆಶ್ರಯದಲ್ಲಿ ಸಂಗೀತ ಕಾರ್ಯಕ್ರಮವು ಮಣಿಪಾಲ ಗೋಲ್ಡನ್ ಜುಬಿಲಿ ಹಾಲ್ ನಲ್ಲಿ ರವಿವಾರ ಜರಗಿತು.
ಅಂತಾರಾಷ್ಟ್ರೀಯ ಕಲಾವಿದ ತಬಲಾ ಮಾಂತ್ರಿಕ ಸ್ವಪನ್ ಚೌಧರಿ ತಬಲ್ ಸೋಲೋ ನಡೆಸಿಕೊಟ್ಟರು. ಮುರಾದ್ ಅಲಿ ಖಾನ್ ಸಹಕರಿಸಿದರು. ಹಿಂದೂ ಸ್ಥಾನಿ ಹಾಗೂ ಕರ್ನಾಟಿಕ್ ಸಂಗೀತ ವಾದನ ಕೂಡ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಣಿಪಾಲ ಟಿಎಂಎ ಪೈ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷ ಅಶೋಕ್ ಪೈ, ತಬಲಾ ಮಾಂತ್ರಿಕ ಸ್ವಪನ್ ಚೌಧರಿ ಅವರನ್ನು ಗೌರವಿಸಿದರು. ಸಂಗೀತ ಸಭಾ ಅಧ್ಯಕ್ಷ ಟಿ.ರಂಗ ಪೈ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.