ಟ್ರಂಪ್ ಸಾಮರ್ಥ್ಯದ ಬಗ್ಗೆ ಭಾರತೀಯರಿಗೆ ಹೆಚ್ಚು ವಿಶ್ವಾಸ: ಸಮೀಕ್ಷೆ

Update: 2020-01-09 16:21 GMT

ವಾಶಿಂಗ್ಟನ್, ಜ. 9: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಜಾಗತಿಕ ವ್ಯವಹಾರಗಳನ್ನು ನಿಭಾಯಿಸುವ ಸಾಮರ್ಥ್ಯದ ಬಗ್ಗೆ ಬೇರೆ ದೇಶಗಳ ಜನರಿಗಿಂತಲೂ ಭಾರತೀಯರಿಗೆ ಹೆಚ್ಚು ವಿಶ್ವಾಸವಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.ಅಮೆರಿಕ ಮತ್ತು ಅದರ ಅಧ್ಯಕ್ಷರ ಬಗ್ಗೆ 32 ದೇಶಗಳ ನಾಗರಿಕರಿಂದ ಪ್ಯೂ ರಿಸರ್ಚ್ ಸೆಂಟರ್ ಅಭಿಪ್ರಾಯ ಸಂಗ್ರಹಿಸಿದೆ.ಟ್ರಂಪ್‌ರ ವಿದೇಶ ನೀತಿಯ ಬಗ್ಗೆ ತಮಗೆ ಸಂಪೂರ್ಣ ಭರವಸೆಯಿದೆ ಎಂದು 10ರಲ್ಲಿ 6 ಭಾರತೀಯರು (56 ಶೇಕಡ) ಹೇಳಿದ್ದಾರೆ.

ಟ್ರಂಪ್‌ರ ಸಾಮರ್ಥ್ಯದ ಬಗ್ಗೆ ಇದೇ ರೀತಿಯ ಅಭಿಪ್ರಾಯವನ್ನು ಒಟ್ಟು 29 ಶೇಕಡ ಮಂದಿ ವ್ಯಕ್ತಪಡಿಸಿದ್ದಾರೆ.ಇತರ ದೇಶಗಳ ಪೈಕಿ ಹೆಚ್ಚಿನವರು ಟ್ರಂಪ್ ಸಾಮರ್ಥ್ಯದ ಬಗ್ಗೆ ಕಡಿಮೆಯಿಂದ ಅತಿ ಕಡಿಮೆ ಭರವಸೆ ವ್ಯಕ್ತಪಡಿಸಿದ್ದಾರೆ. ಮೆಕ್ಸಿಕನ್ನರ ಪೈಕಿ ಕೇವಲ 8 ಶೇಕಡ ಮಂದಿ ಟ್ರಂಪ್ ಸಾಮರ್ಥ್ಯದ ಬಗ್ಗೆ ನಂಬಿಕೆ ಹೊಂದಿದ್ದಾರೆ. ಇದು ಅತ್ಯಂತ ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News