ಜ.10: ಜೋಕಟ್ಟೆಗೆ ಸಿಂಸಾರುಲ್ ಹಖ್ ಹುದವಿ
Update: 2020-01-09 22:42 IST
ಮಂಗಳೂರು, ಜ.9: ಅಂಜುಮನ್ ಖುವ್ವತುಲ್ ಇಸ್ಲಾಂ ಜೋಕಟ್ಟೆ ಇದರ ಆಶ್ರಯದಲ್ಲಿ ರಿಫಾಯಿ ರಾತೀಬ್ ಪ್ರಯುಕ್ತ ನಡೆದ ಕಥಾಪ್ರಸಂಗ ಮತ್ತು ಧಾರ್ಮಿಕ ಮತ ಪ್ರವಚನದ ಸಮಾರೋಪವು ಜ.10ರಂದು ನಡೆಯಲಿದ್ದು, ಸಂಜೆ 4 ಗಂಟೆಗೆ ಅಂತಾರಾಷ್ಟ್ರೀಯ ಖ್ಯಾತಿಯ ವಾಗ್ಮಿ ಉಸ್ತಾದ್ ಸಿಂಸಾರುಲ್ ಹಖ್ ಹುದವಿ ಮತ್ತು ಮುಹಮ್ಮದ್ ನಬೀಲ್ ಬರಕಾತಿ, ಶಾಸಕ ಯು.ಟಿ. ಖಾದರ್ ಹಾಗು ಉಲಮಾ-ಉಮರಾಗಳು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.