×
Ad

ಜ.19ರಂದು ಪೊಲಿಯೋ ಲಸಿಕೆ ಅಭಿಯಾನ

Update: 2020-01-09 22:56 IST

ಮಂಗಳೂರು, ಜ.9: ಮಕ್ಕಳನ್ನು ಮಾರಕ ರೋಗದಿಂದ ತಪ್ಪಿಸಲು ತಂದೆ-ತಾಯಿಗಳು, ಪೋಷಕರು ಪಲ್ಸ್ ಪೋಲಿಯೋ ಲಸಿಕೆಯನ್ನು ಮಕ್ಕಳಿಗೆ ಅಗತ್ಯವಾಗಿ ಹಾಕಿಸಬೇಕು ಎಂದು ಮಂಗಳೂರು ಉಪ ತಹಶೀಲ್ದಾರ್ ವತ್ಸಲಾ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಪಲ್ಸ್ ಪೋಲಿಯೋ ಲಸಿಕೆಯು ಮಹತ್ವವಾಗಿದ್ದು ಇದಕ್ಕೆ ಎಲ್ಲಾ ಇಲಾಖೆಯ ಸಿಬ್ಬಂದಿ ವರ್ಗವು ಕೈ ಜೋಡಿಸಬೇಕು. 2019-20ನೇ ಸಾಲಿನ ಪಲ್ಸ್ ಪೋಲಿಯೋ ಕಾರ್ಯಕ್ರಮ ಜ.19ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಪೋಲಿಯೋ ಲಸಿಕೆ ಪಡೆಯಲು ಬೂತ್‌ಗೆ ಬರದಂತಹ ಗ್ರಾಮೀಣ ಮತ್ತು ನಗರ ಪ್ರದೇಶದ ಮಕ್ಕಳಿಗೆ ಮನೆ ಮನೆಗೆ ಭೇಟಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮ್ಮಿಕೊಂಡಿದ್ದೇವೆ ಎಂದು ವತ್ಸಲಾ ಹೇಳಿದರು.

ತಾಲೂಕು ಆರೋಗ್ಯಧಿಕಾರಿ ಡಾ. ಸುಜಯ್ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News