ಲಂಚ ಸ್ವೀಕಾರ: ನ್ಯಾಯಾಂಗ ಬಂಧನ
Update: 2020-01-09 23:19 IST
ಉಪ್ಪಿನಂಗಡಿ: ಮರ ಕಡಿಯಲು ಇಲಾಖಾನುಮತಿ ನೀಡಲು ಲಂಚ ಸ್ವೀಕರಿಸುವ ವೇಳೆ ಎಸಿಬಿ ಪೊಲೀಸರಿಂದ ಬಂಧಿತನಾದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಕಚೇರಿಯ ಅರಣ್ಯ ರಕ್ಷಕ ಸುಧೀರ್ ಎನ್.ಗೆ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಖಾಸಗಿ ಸ್ವಾಮ್ಯದ ಭೂಮಿಯಲ್ಲಿನ ಮರವನ್ನು ಕಡಿಯುವ ಸಂಬಂಧ ಅರಣ್ಯ ಇಲಾಖೆಯ ಅನುಮತಿ ಪಡೆಯಲು ವ್ಯಕ್ತಿಯೋರ್ವ ರಿಂದ 15 ಸಾವಿರ ರೂ. ಲಂಚಕ್ಕಾಗಿ ಈತ ಬೇಡಿಕೆ ಇಟ್ಟಿದ್ದ. ಬುಧವಾರ ಲಂಚದ ಹಣವನ್ನು ಪಡೆಯುತ್ತಿದ್ದಾಗ ದಾಳಿ ನಡೆಸಿದ ಎಸಿಬಿ ಪೊಲೀಸರು ಆರೋಪಿ ಯನ್ನು ಬಂಧಿಸಿದ್ದರು.