ಕಣಚೂರು ಆಸ್ಪತ್ರೆಯಲ್ಲಿ 'ಲೈವ್ ಸರ್ಜಿಕಲ್' ಕಾರ್ಯಾಗಾರ' ಉದ್ಘಾಟನೆ
ಕೊಣಾಜೆ, ಜ.10: ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಬಹಳಷ್ಟು ಸಂಶೋಧನೆಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಡೆಯುತ್ತಿರುವ ಕಾರ್ಯಾಗಾರವೂ ಮಹತ್ತ್ವದ್ದಾಗಿದೆ ಎಂದು ಪ್ರಖ್ಯಾತ ಶಸ್ತ್ರಚಿಕಿತ್ಸಕ ಡಾ.ವೀರಬಾಹು ಹೇಳಿದರು.
ಅವರು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಡೆದ ಕ್ರಾನಿಯೋಫೇಶಿಯಲ್ ಲೈವ್ ಸರ್ಜಿಕಲ್ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕಣಚೂರು ಮೋನು, ಶಸ್ತ್ರಚಿಕಿತ್ಸೆ ವಿಷಯದಲ್ಲಿ ನಡೆಯುತ್ತಿರುವ ಇಂತಹ ಕಾರ್ಯಾಗಾರ ಬಹಳಷ್ಟು ಪ್ರಕರಣಗಳನ್ಬು ಭೇದಿಸಬಲ್ಲುದು. ಇಂತಹ ಕಾರ್ಯಕ್ರಮಗಳಿಗೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಕಣಚೂರು ಸಂಸ್ಥೆ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು.
ಕಾರ್ಯಾಗಾರದಲ್ಲಿ ಕ್ರಾನಿಯೋಫೇಶಿಯಲ್ ವಿಭಾಗದ ಮುಖ್ಯಸ್ಥ ಡಾ.ಮುಸ್ತಫಾ ಕಾರ್ಯಾಗಾರದ ಮಹತ್ವದ ಬಗ್ಗೆ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ.ಜಿಯೋವರ್ ಲೋಬೋ, ಡಾ.ಪರಿತ್ ಲಡಾನಿ, ಡಾ.ಮನುಪ್ರಸಾದ್, ಡಾ.ಶ್ರೇಯಸ್ ಸೊರಕೆ, ಡಾ ಕೃಷ್ಣಮೂರ್ತಿ ಅನುಭವಗಳನ್ನು ಹಂಚಿಕೊಂಡರು.
ಕಣಚೂರು ಶೈಕ್ಷಣಿಕ ಸಂಸ್ಥೆಯ ನಿರ್ದೇಶಕ ಯು.ಕೆ.ರಹಿಮಾನ್, ಡಾ.ಮಂಜುನಾಥ್ ರೈ ಮತ್ತಿತರರು ಉಪಸ್ಥಿತರಿದ್ದರು.