ಜ.11: ತುಂಬೆ ಶಾಲೆಯಲ್ಲಿ ರಕ್ಷಕ- ಶಿಕ್ಷಕ ಸಮಾವೇಶ, ಕ್ರೀಡಾ ಕೂಟ ಕಾರ್ಯಕ್ರಮ
ಫರಂಗಿಪೇಟೆ : ತುಂಬೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಯ ವತಿಯಿಂದ ಜ. 11 ರಂದು ರಕ್ಷಕ ಶಿಕ್ಷಕ ಸಮಾವೇಶ, ಕ್ರೀಡಾ ಕೂಟ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಪದವಿ ಪೂರ್ವ ಕಾಲೇಜ್ ತುಂಬೆಯ ಸಭಾಂಗಣದಲ್ಲಿ ನಡೆಯಲಿದೆ.
ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ, ಸಜಿಪ ಮುನ್ನೂರು ಜಿಲ್ಲಾ ಪಂಚಾಯಯ್ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ ಉದ್ಘಾಟನೆ ಮಾಡಲಿದ್ದಾರೆ.
ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಅಡ್ಯಾರ್ ನಿರ್ದೇಶಕ ಜಗನ್ನಾಥ್ ಚೌಟ, ಎಮ್ ಜೆ ಎಫ್ ಜಿಲ್ಲಾಧ್ಯಕ್ಷ ಅಮೀರ್ ಅಹ್ಮದ್ ಕೆಎಸ್, ತುಂಬೆ ಗ್ರಾಪಂ ಸದಸ್ಯ ಮೊಹಮ್ಮದ್ ಝಹೂರ್, ಶ್ರೀ ಲಕ್ಷ್ಮಿ ವಿಷ್ಣು ಮೂರ್ತಿ ದೇವಸ್ಥಾನ ದೇವಂದಬೆಟ್ಟು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಶ್ರೀ ಸೈಲ, ಧನಂಜಯ ಪೂಜಾರಿ ರಾಮಲ್ ಕಟ್ಟೆ, ಕೆಎಸ್ಸಾರ್ಟಿಸಿ ನಿವೃತ ಅಧಿಕಾರಿ ಎಫ್ಎ ಖಾದರ್, ನಾಗರಿಕ ಕ್ರಿಯಾ ಸಮಿತಿ ಅಧ್ಯಕ್ಷರು ವಿಎಚ್ ಕರೀಮ್, ಎಮ್ ಜೆ ಎಮ್ ತುಂಬೆ ಅಧ್ಯಕ್ಷ ಇಮ್ತಿಯಾಜ್ ಅಹಮದ್ ತುಂಬೆ, ಇಂಚರ ಕಲಾವಿದ ಸದಾಶಿವ ಡಿ ತುಂಬೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸನ್ಮಾನ ಹಾಗೂ ಸಮಾರೋಪ ಕಾರ್ಯಕ್ರಮದಲ್ಲಿ ಮೊಹಿದ್ದೀನ್ ಎಜುಕೇಷನಲ್ ಟ್ರಸ್ಟ್ ತುಂಬೆ ಇದರ ಸಂಸ್ಥಾಪಕ ಡಾ ಬಿ ಅಹಮದ್ ಹಾಜಿ ತುಂಬೆ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ, ಮಾಜಿ ಸಚಿವ ಯು.ಟಿ. ಖಾದರ್, ಮೊಹಿದ್ದೀನ್ ಎಜುಕೇಷನಲ್ ಟ್ರಸ್ಟಿ ಬಿ ಅಬ್ದುಲ್ ಸಲಾಮ್, ತುಂಬೆ ಜಿಲ್ಲಾ ಪಂ ಮಾಜಿ ಸದಸ್ಯ ಎಫ್ ಉಮರ್ ಫಾರೂಕ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ನಿಸಾರ್ ಅಹಮದ್ ವಳವೂರು, ತಾಲೂಕು ಪಂ ಸದಸ್ಯ ಗಣೇಶ್ ಸುವರ್ಣ, ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ, ಉದ್ಯಮಿ ಹಬಿದಾಳಿ ಕುಂಜತ್ಕಳ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಹಾಗೂ ವಿಶೇಷ ಸಾಧನೆ ಮಾಡಿದ ಸಂಸ್ಥೆಯ ಹಳೇ ವಿದ್ಯಾರ್ಥಿಗಳಾದ ಅನ್ವರ್ ಅಮೆಮಾರ್ ಸೂಫಿ, ಮೊಹಮ್ಮದ್ ಆಸಿಫ್, ಆಯಿಷಾ ಖಾಸಿಮ್, ಹರ್ಷಿತಾ ಪೂಂಜಾ, ದಿವ್ಯಶ್ರೀ ಎಚ್ ಶೆಟ್ಟಿ, ಜಿಎಸ್ ಗೋಪಾಲ್, ಜಸೊನ್ ಪಾಯಾಸ್, ಬಿಂದ್ಯಾ ಜಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಬಶೀರ್ ತಂಡೇಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.