ಬೆಂಕಿಯಿಂದ ಕಿಮ್ ಕುಟುಂಬದ ಭಾವಚಿತ್ರದ ಬದಲಿಗೆ ಮಕ್ಕಳನ್ನು ರಕ್ಷಿಸಿದ್ದ ಉ. ಕೊರಿಯಾದ ಮಹಿಳೆಗೆ ಕಾದಿದೆ ಜೈಲು ಶಿಕ್ಷೆ

Update: 2020-01-10 13:21 GMT
Photo: Pen News/ Ray Cunningham

ಪ್ಯೋಗ್‍ಯಾಂಗ್: ಉತ್ತರ ಕೊರಿಯಾದ ಉತ್ತರ ಹ್ಯಾಂಗ್ಯೋಗ್ ಪ್ರಾಂತ್ಯದ ಒನ್ಸೊಂಗ್ ಕೌಂಟಿ ಎಂಬಲ್ಲಿ ಎರಡು ಕುಟುಂಬಗಳು ಹಂಚಿಕೊಂಡಿದ್ದ ಮನೆಯೊಂದರಲ್ಲಿ ಬೆಂಕಿ ಆಕಸ್ಮಿಕವುಂಟಾದಾಗ ಅಲ್ಲಿದ್ದ ದೇಶದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಅವರ ಭಾವಚಿತ್ರವನ್ನು ರಕ್ಷಿಸುವ ಬದಲು ತನ್ನಿಬ್ಬರು ಮಕ್ಕಳನ್ನು ರಕ್ಷಿಸಿದ ಮಹಿಳೆ ಜೈಲು ಶಿಕ್ಷೆಯನ್ನು ಎದುರಿಸುವ ಸಾಧ್ಯತೆಯಿದೆ. ದೇಶದ ಸುರಕ್ಷತಾ ಸಚಿವಾಲಯ ಮಹಿಳೆಯನ್ನು ತನಿಖೆಗೆ ಒಳಪಡಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಘಟನೆ ನಡೆದಾಗ ಮನೆಯಲ್ಲಿ ಮಕ್ಕಳು ಮಾತ್ರ ಇದ್ದರೆನ್ನಲಾಗಿದ್ದು, ಅಗ್ನಿ ಅವಘಡದ ಬಗ್ಗೆ ತಿಳಿದು ಓಡಿ ಬಂದಿದ್ದರು. ಈ ಸಂದರ್ಭ  ಮನೆಯಲ್ಲಿದ್ದ ದೇಶದ ನಾಯಕನ ಫೋಟೋ ಕೂಡ ಸುಟ್ಟು ಹೋಗಿತ್ತೆನ್ನಲಾಗಿದೆ. ಈ ತಪ್ಪಿಗೆ ಮಹಿಳೆಗೆ ದೀರ್ಘಾವಧಿ ಜೈಲು ಶಿಕ್ಷೆಯಾಗಬಹುದಾಗಿದೆ. ಘಟನೆಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳನ್ನು ನೋಡಿಕೊಳ್ಳಲೂ ಮಹಿಳೆಗೆ ಅವಕಾಶ ನೀಡಲಾಗಿಲ್ಲ

ಉತ್ತರ ಕೊರಿಯಾದಲ್ಲಿ ಪ್ರವಾಹ ಅಥವಾ ಅಗ್ನಿ ದುರಂತಗಳ ಸಂದರ್ಭದಲ್ಲಿ ಕಿಮ್ ಅವರ ಭಾವಚಿತ್ರಗಳನ್ನು ಕಾಪಾಡಿದವರನ್ನು ಅಥವಾ ಅವುಗಳನ್ನು ಕಾಪಾಡುವ ಯತ್ನದಲ್ಲಿ ಸಾವಿಗೀಡಾದವರನ್ನು ಹೀರೋಗಳೆಂದು ಹಾಡಿ ಹೊಗಳಲಾಗುತ್ತದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News