ಮಂಜನಾಡಿ: ಎನ್ ಆರ್ ಸಿ, ಸಿಎಎ, ಎನ್ ಪಿ ಆರ್ ವಿರೋಧಿಸಿ ಪ್ರತಿಭಟನಾ ಸಭೆ

Update: 2020-01-10 14:22 GMT

ಮಂಜನಾಡಿ: ಎನ್ ಆರ್ ಸಿ, ಸಿಎಎ, ಎನ್ ಪಿ ಆರ್ ವಿಚಾರದಲ್ಲಿ ಮೋದಿ, ಅಮಿತ್ ಅವರ ಸಾಧನೆಗೆ ಸಾವಿರ ಶುಭಾಶಯ ಹೇಳಬೇಕಾಗಿದೆ. ರಾಜ್ಯದಲ್ಲಿ ಭಿನ್ನವಾಗಿರುವ ಮುಸ್ಲಿಮರ ಪಂಗಡಗಳನ್ನು ಒಗ್ಗೂಡಿಸುವ ಕೆಲಸ ಅವರು ಮಾಡಿದ್ದಾರೆ ಎಂದು ಮಂಜನಾಡಿ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ಹೇಳಿದರು.

ಅವರು ಮಂಜನಾಡಿ ಕೇಂದ್ರ ಜುಮಾ ಮಸೀದಿ ವತಿಯಿಂದ ಮಸೀದಿ ವಠಾರದಲ್ಲಿ ಶುಕ್ರವಾರ ನಡೆದ ಎನ್ ಆರ್ ಸಿ, ಸಿಎಎ, ಎನ್ ಪಿ ಆರ್ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಮಸೀದಿ ಕಾರ್ಯದರ್ಶಿ ಅಝೀಝ್ ಪರ್ತಿಪಾಡಿ ಮಾತನಾಡಿ, ಎನ್ ಆರ್ ಸಿ ವಿಚಾರ ದಲ್ಲಿ ಜನರು ಗೊಂದಲದಲ್ಲಿದ್ದಾರೆ. ಸ್ವಾತಂತ್ರ್ಯ ಸಿಕ್ಕಿ  ಬಹಳ ವರ್ಷದ ಬಳಿಕ  ನಮ್ಮಲ್ಲಿ ವಿವರಣೆ  ನೀಡಬೇಕು ಎಂದು ಸರ್ಕಾರ ಕೇಳುತ್ತಿದೆ. ಸ್ಥಳೀಯ ಅಧಿಕಾರಿಗಳು ಪೌರತ್ವ ವಿಚಾರಿಸಲು ಎನ್ ಪಿಆರ್ ದಾಖಲೆ ಇಟ್ಟು ಕೊಳ್ಳುತ್ತಾರೆ. ಎನ್ ಆರ್ ಸಿ ಅಸ್ಸಾಂ ನಲ್ಲಿ ನಡೆಸಿದಾಗ ಬಹುಸಂಖ್ಯಾತ ಜನರಲ್ಲಿ ದಾಖಲೆ ಸಿಗದ ಕಾರಣ ಮೋದಿ ಸರ್ಕಾರ ಸಿಎಎ ಜಾರಿಗೆ ತಂದು ದಾಖಲೆ ನೀಡಲು ಹೊರಟಿದೆ. ಮುಸ್ಲಿಂರನ್ನು ಹೊರಗಿಟ್ಟು ಪಾಕ್, ಅಪಘಾನಿಸ್ಥಾನ ವಲಸಿಗರಿಗೆ ಪೌರತ್ವ ನೀಡಲು ಮೋದಿ ಸರ್ಕಾರ ಹೊರಟಿರುವುದು ಸಂವಿಧಾನ ವಿರೋಧಿ ನೀತಿ. ಕೇಂದ್ರ ಸಚಿವರಿಗೆ ಜ್ಞಾನ ಇಲ್ಲ ಎಂದು ಸುಬ್ರಹ್ಮಣ್ಯ ಸ್ವಾಮಿ ಹೇಳಿದ್ದಾರೆ . ದೇಶದ ಆಡಳಿತ ಅವಿವೇಕಿ ನಾಯಕರಲ್ಲಿದ್ದರೆ ಏನಾಗುತ್ತದೆ ಎಂದು ಈಗ ಗೊತ್ತಾಗುತ್ತದೆ. ಇದಕ್ಕಿಂತ ಹಿಟ್ಲರ್ ಆಡಳಿತ ಉತ್ತಮ ವಾಗಿತ್ತು. ಸ್ವಾತಂತ್ರ್ಯದಲ್ಲಿ ಎಲ್ಲಾ ಧರ್ಮದವರು  ಹೋರಾಟ ಮಾಡಿದ್ದಾರೆ. ನಮಗೆ ಇಂತಹ ದುರಂತದ ಕಾಯ್ದೆ ಬೇಡ. ತಡೆಯಾಜ್ಞೆ ಬಂದರೆ ಸರಿ. ಇಲ್ಲದಿದ್ದರೆ ಜ.23ಕ್ಕೆ ತೀರ್ಮಾನಕ್ಕೆ ಬರುತ್ತದೆ. ಸಂವಿಧಾನಕ್ಕೆ ಮಾತ್ರ ಗೌರವ, ಮೋದಿ ಅಮಿತ್ ರಿಗೆ ಹೆದರಬೇಕಾಗಿಲ್ಲ ಎಂದರು.

ಆಲಿಕುಂಞಿ ಪಾರೆ, ಇಝುದ್ದೀನ್ ಮಾಸ್ಟರ್,  ಅಝೀಝ್ ಪರ್ತಿಪಾಡಿ, ಎನ್ ಎಸ್ ಕರೀಂ ಮಾತನಾಡಿದರು. ವೇದಿಕೆಯಲ್ಲಿ ನೆಕ್ಕರೆ ಬಾವು, ಅತ್ತಾವುಲ್ಲ, ಮೊಯ್ದಿನ್ ಬಸರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News