×
Ad

ಎಸ್‍ಸಿಡಿಸಿಸಿ ಬ್ಯಾಂಕ್ ಗೆ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಮಾನ್ಯತೆ

Update: 2020-01-10 20:15 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‍ಸಿಡಿಸಿಸಿ ಬ್ಯಾಂಕ್)ನ ಕಾರ್ಯನಿರ್ವಹಣೆಯನ್ನು ಗುರುತಿಸಿ ಅಮೆರಿಕದ ಪ್ರತಿಷ್ಠಿತ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಬ್ಯಾಂಕಿಗೆ “ಜ್ಞಾನ ಪಾಲುದಾರ“ಮಾನ್ಯತೆಯನ್ನು ನೀಡಿ ಗೌರವಿಸಿದೆ.

ಶುಕ್ರವಾರ ನಗರದ ಎಸ್‍ಸಿಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಧ್ಯಯನ ತಂಡ ಮೈಕ್ರೋ ಫೈನಾನ್ಸ್ ಮತ್ತು ಸ್ವಸಹಾಯ ಗುಂಪು ಯೋಜನೆಯ ಅನುಷ್ಠಾನದಲ್ಲಿ ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ವಹಿಸುತ್ತಿರುವ ಕಾರ್ಯವನ್ನು  ಶ್ಲಾಘಿಸಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ “ಜ್ಞಾನ ಪಾಲುದಾರ” ಪ್ರಮಾಣಪತ್ರವನ್ನು ಹಾಗೂ ಟ್ರೋಫಿಯನ್ನು ಬ್ಯಾಂಕಿನ ಅಧ್ಯಕ್ಷ ಡಾ.  ಎಂ.ಎನ್.ರಾಜೇಂದ್ರ ಕುಮಾರ್ ಅರವರಿಗೆ ಹಸ್ತಾಂತರಿಸಿತು.

ಎಸ್‍ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ ಬ್ಯಾಂಕ್ ಪ್ರವರ್ತಿತ ನವೋದಯ ಸ್ವಸಹಾಯ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ಬಡವರ್ಗದ ಜನರಿಗೆ ಆರ್ಥಿಕ ಸ್ವಾವಲಂಬನೆಯನ್ನು ನೀಡುತ್ತಿವೆ. ಮಹಿಳಾ ಸಬಲೀಕರಣದ ಹಾದಿಯಲ್ಲಿ ಆದಾಯೋತ್ವನ್ನ ಚಟುವಟಿಕೆಗಳಿಗೆ ಸಾಲ ಸೌಲಭ್ಯಗಳನ್ನು ನೀಡಿ ಮುಖ್ಯವಾಗಿ ಮಹಿಳೆ ಯರ ಜೀವನದಲ್ಲಿ ಆರ್ಥಿಕ, ಸಾಮಾಜಿಕ ಶೈಕ್ಷಣಿಕ ಉನ್ನತ್ತಿಗೆ ಬ್ಯಾಂಕ್ ಪ್ರೇರಕ ಶಕ್ತಿಯಾಗಿದೆ. ದೇಶದಲ್ಲೇ ಸಹಕಾರ ಕ್ಷೇತ್ರದ ಬ್ಯಾಂಕ್ ಒಂದು ಅಂತರಾಷ್ಟ್ರೀಯ ವಿಶ್ವವಿದ್ಯಾಲಯದಿಂದ  ಮಾನ್ಯತೆಯನ್ನು ಪಡೆದಿರುವುದು ಇದೇ ಪ್ರಥಮ ಹಾಗೂ ಇದು ಸಹಕಾರ ಕ್ಷೇತ್ರಕ್ಕೆ ಹೆಮ್ಮೆಯ ವಿಚಾರ ಎಂದರು.

ಅಮೆರಿಕ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ಸಮಾಜಸೇವೆ ಮತ್ತು ಅಧ್ಯಯನ ತಂಡದ ನೇತೃತ್ವ ವಹಿಸಿದ ಫ್ರೋಫೆಸರ್ ಪೆಮೀಡಾ ಹ್ಯಾಂಡಿ ಮಾತನಾಡಿ ಎಸ್‍ಸಿಡಿಸಿಸಿ ಬ್ಯಾಂಕ್‍ನಿಂದ ಗ್ರಾಮಾಂತರ ಪ್ರದೇಶದ ಬಡವರ್ಗದ ಜನರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಬ್ಯಾಂಕ್ ವಿಶೇಷವಾಗಿ ಮಹಿಳೆಯರ ಶಕ್ತಿ ಸಂವರ್ಧನೆಗೆ ಹೆಚ್ಚು ಮಹತ್ವವನ್ನು ನೀಡುತ್ತಿದೆ. ಬ್ಯಾಂಕಿನ ಗುಣಾತ್ಮಕ ಬೆಳವಣೆಗೆಯಲ್ಲಿ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರ ಅವಿರತ ಮುಂದಾಳತ್ವವನ್ನು ಫ್ರೊ.ಪೆಮೀಡಾ ಹ್ಯಾಂಡಿ ಶ್ಲಾಘಿಸಿದರು.

ಕಳೆದ ಒಂಭತ್ತು ವರ್ಷಗಳಿಂದಲೂ ಬ್ಯಾಂಕ್ ಹಾಗೂ ನವೋದಯ ಟ್ಟಸ್ಟ್‍ನ ಕಾರ್ಯಚರಣೆಯ ಬಗ್ಗೆ ಈ ಅಧ್ಯಯನ ತಂಡ ಎಸ್‍ಸಿಡಿಸಿಸಿ ಬ್ಯಾಂಕ್‍ಗೆ ಆಗಮಿಸುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ವಿಕಸನಕ್ಕೆ ಮತ್ತು ಸಾಮಾಜಿಕ ಪರಿವರ್ತನೆಗೆ ಬ್ಯಾಂಕ್ ಮತ್ತು ನವೋದಯ ಟ್ರಸ್ಟ್ ಮಾಡುತ್ತಿರುವ ಸಮಾಜ ಸೇವೆಯನ್ನು ಫ್ರೊ.ಪೆಮೀಡಾ ಹ್ಯಾಂಡಿ ಈ ಸಂದರ್ಭದಲ್ಲಿ ಪ್ರಶಂಸಿದರು.

ಈ ಅಧ್ಯಯನ ತಂಡದಲ್ಲಿ ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ಡಾ. ಆಲಿಸನ್ ರಸ್ಸೆಲ್, ವಾಘನ್ ಸಾಯರ್ಸ್, ಆಂಡ್ರ್ಯೂ ಫಾಲ್ಸ್ಟಿಚ್, ಆ್ಯನೆಟ್ ಸ್ಮಿತ್, ಕ್ಯಾರಿ ರೆನೋಲ್ಡ್ಸ್, ನತಾಶಾ ಮೆಕ್ಲಿನ್, ಹ್ಯಾಲಿ ವಾಟೆಲ್, ಸಬಾ ಕೌಸರ್ ಹಾಗೂ ಅಧ್ಯಯನ ತಂಡದ ಸಂಯೋಜಕರಾದ ವಿನೋದ್ ದೀಕ್ಷಿತ್ ಇದ್ದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಭಾಸ್ಕರ್ ಎಸ್. ಕೋಟ್ಯಾನ್, ದೇವಿ ಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೊಟ್ಟು, ಸದಾಶಿವ ಉಳ್ಳಾಲ್, ಮಹೇಶ್ ಹೆಗ್ಡೆ, ಜೈರಾಜ್ ಬಿ. ರೈ, ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಪ್ರವೀಣ್ ಬಿ. ನಾಯಕ್, ಬ್ಯಾಂಕಿನ ಮಹಾಪ್ರಬಂಧಕರಾದ ಶ್ರೀ ಗೋಪಿನಾಥ್ ಭಟ್, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News