ವಿಮಾನಕ್ಕೆ ಕ್ಷಿಪಣಿ ಬಡಿದಿಲ್ಲ; ಇದು ಮಾನಸಿಕ ಯುದ್ಧ: ಇರಾನ್

Update: 2020-01-10 15:56 GMT

ದುಬೈ, ಜ. 10: ಇರಾನ್ ರಾಜಧಾನಿ ಟೆಹರಾನ್ ಸಮೀಪ ಬುಧವಾರ ಪತನಗೊಂಡ ಯುಕ್ರೇನ್ ವಿಮಾನಕ್ಕೆ ಇರಾನ್ ಹಾರಿಸಿದ ಕ್ಷಿಪಣಿ ಬಡಿದಿತ್ತು ಎಂಬ ವಾದವನ್ನು ಇರಾನ್ ಸರಕಾರದ ವಕ್ತಾರ ಅಲಿ ರಬೀಐ ತಳ್ಳಿಹಾಕಿದ್ದಾರೆ ಎಂದು ಆ ದೇಶದ ಸರಕಾರಿ ಟಿವಿ ವರದಿ ಮಾಡಿದೆ.

‘‘ಈ ಎಲ್ಲ ವರದಿಗಳು ಇರಾನ್ ವಿರುದ್ಧ ನಡೆಸಲಾಗುತ್ತಿರುವ ಮಾನಸಿಕ ಯುದ್ಧವಾಗಿದೆ. ವಿಮಾನದಲ್ಲಿದ್ದ ನಾಗರಿಕರ ದೇಶಗಳು ವಿಮಾನದ ಕಪ್ಪು ಪಟ್ಟಿಯ ವಿಶ್ಲೇಷಣೆಯಲ್ಲಿ ಭಾಗವಹಿಸಲು ತಮ್ಮ ಪ್ರತಿನಿಧಿಗಳನ್ನು ಕಳುಹಿಸಬಹುದಾಗಿದೆ. ಈ ತನಿಖೆಯಲ್ಲಿ ಭಾಗವಹಿಸಲು ಪ್ರತಿನಿಧಿಯನ್ನು ಕಳುಹಿಸುವಂತೆ ನಾವು ಬೋಯಿಂಗ್ ಕಂಪೆನಿಯನ್ನು ಒತ್ತಾಯಿಸುತ್ತೇವೆ’’ ಎಂದು ರಬೀಐ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News