×
Ad

ಪತನಗೊಂಡ ವಿಮಾನಕ್ಕೆ ಯಾವುದೇ ಕ್ಷಿಪಣಿ ಬಡಿದಿಲ್ಲ ಎನ್ನುವುದು ಸ್ಪಷ್ಟ: ಇರಾನ್ ನಾಗರಿಕ ವಾಯುಯಾನ ಸಂಸ್ಥೆಯ ಮುಖ್ಯಸ್ಥ

Update: 2020-01-10 21:50 IST

ಟೆಹರಾನ್, ಜ. 10: ಟೆಹರಾನ್ ಹೊರವಲಯದಲ್ಲಿ ಪತನಗೊಂಡಿರುವ ಯುಕ್ರೇನ್ ಏರ್‌ಲೈನ್ಸ್ ವಿಮಾನಕ್ಕೆ ಯಾವುದೇ ಕ್ಷಿಪಣಿ ಬಡಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಇರಾನ್‌ನ ನಾಗರಿಕ ವಾಯುಯಾನ ಸಂಸ್ಥೆಯ ಮುಖ್ಯಸ್ಥ ಅಲಿ ಆಬಿದ್‌ಝಾದೇ ಶುಕ್ರವಾರ ಹೇಳಿದ್ದಾರೆ.

‘‘ಒಂದು ವಿಷಯವಂತೂ ಸ್ಪಷ್ಟ. ಈ ವಿಮಾನಕ್ಕೆ ಯಾವುದೇ ಕ್ಷಿಪಣಿ ಬಡಿದಿಲ್ಲ’’ ಎಂದು ಟೆಹರಾನ್‌ನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು ಹೇಳಿದರು. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ ನಡೆಸಿದ ಘೋರ ಪ್ರಮಾದವೊಂದು ಯುಕ್ರೇನ್ ವಿಮಾನ ಪತನಕ್ಕೆ ಕಾರಣವಾಗಿದೆ ಎನ್ನುವುದನ್ನು ಹಲವು ಗುಪ್ತಚರ ಮೂಲಗಳು ಸೂಚಿಸಿವೆ ಎಂದು ಕೆನಡ ಮತ್ತು ಬ್ರಿಟನ್ ಹೇಳಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

‘‘ಮಾಹಿತಿಗಳು ಬ್ಲಾಕ್‌ಬಾಕ್ಸ್‌ಗಳಲ್ಲಿವೆ. ಅವುಗಳು ಸುಭದ್ರವಾಗಿವೆ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ’’ ಎಂದು ಆಬಿದ್‌ಝಾದೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News