×
Ad

ಯುಕ್ರೇನ್ ವಿಮಾನವನ್ನು ಕ್ಷಿಪಣಿ ಎಂದು ತಪ್ಪಾಗಿ ಭಾವಿಸಿ ಉರುಳಿಸಲಾಯಿತು: ರೆವಲೂಶನರಿ ಗಾರ್ಡ್ಸ್‌ನ ಹಿರಿಯ ಸೇನಾಧಿಕಾರಿ

Update: 2020-01-11 23:46 IST

ಟೆಹರಾನ್, ಜ. 11: ಇರಾನ್ ಹೊಡೆದುರುಳಿಸಿದ ಯುಕ್ರೇನ್ ಏರ್‌ಲೈನ್ಸ್ ವಿಮಾನವನ್ನು ಕ್ಷಿಪಣಿ ಎಂದು ತಪ್ಪಾಗಿ ಗುರುತಿಸಲಾಗಿತ್ತು ಎಂದು ರೆವಲೂಶನರಿ ಗಾರ್ಡ್ಸ್‌ನ ಹಿರಿಯ ಸೇನಾಧಿಕಾರಿಯೊಬ್ಬರು ಶನಿವಾರ ಇರಾನ್ ಸರಕಾರಿ ಟೆಲಿವಿಶನ್‌ನಲ್ಲಿ ಹೇಳಿದ್ದಾರೆ.

ಕಿರು ವ್ಯಾಪ್ತಿಯ ಕ್ಷಿಪಣಿಯೊಂದರ ಮೂಲಕ ವಿಮಾನವನ್ನು ಹೊಡೆದುರುಳಿಸಲಾಯಿತು ಎಂದು ರೆವಲೂಶನರಿ ಗಾರ್ಡ್ಸ್‌ನ ಏರೋಸ್ಪೇಸ್ ವಿಭಾಗದ ಮುಖ್ಯಸ್ಥ ಅಮಿರಾಲಿ ಹಾಜಿಝದಿಹ್ ಹೇಳಿದರು.

ಯುಕ್ರೇನ್ ಏರ್‌ಲೈನ್ಸ್ ವಿಮಾನವನ್ನು ಹೊಡೆದುರುಳಿಸಿದ ಸಂಪೂರ್ಣ ಹೊಣೆಯನ್ನು ಅವರು ವಹಿಸಿಕೊಂಡರು.

‘‘ಇಂಥ ಘಟನೆಯೊಂದನ್ನು ನೋಡುವ ಬದಲು ನಾನು ಸತ್ತಿದ್ದರೆ ಚೆನ್ನಾಗಿತ್ತು’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News