ತೊಕ್ಕೊಟ್ಟು: ಮೆಸ್ಕಾಂ ಎಟಿಪಿ ಯಂತ್ರಕ್ಕೆ ಕನ್ನ; ಸಾವಿರಾರು ರೂ. ಕಳವು

Update: 2020-01-12 04:51 GMT

ಕೊಣಾಜೆ, ಜ.12: ತೊಕ್ಕೊಟ್ಟುವಿನ ಚೆಂಬುಗುಡ್ಡೆಯಲ್ಲಿರುವ ಮೆಸ್ಕಾಂ ಎಟಿಪಿ ಯಂತ್ರಕ್ಕೆ ಕನ್ನ ಹಾಕಿರುವ ಕಳ್ಳರು ಸಾವಿರಾರು ರೂ. ನಗದು ದೋಚಿರುವ ಘಟನೆ ಕಳೆದ ರಾತ್ರಿ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಚೆಂಬುಗುಡ್ಡೆಯಲ್ಲಿರುವ ಮೆಸ್ಕಾಂ ಉಪ ವಿಭಾಗದಲ್ಲಿ ಈ ಕಳ್ಳತನ ನಡೆದಿದೆ. ಗ್ರಾಹಕರು ಮೆಸ್ಕಾಂ ಬಿಲ್ ಪಾವತಿಸುವ ಯಂತ್ರವಾಗಿರುವ ಎಟಿಪಿ ಇರುವ ಕೋಣೆಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಸುಮಾರು 70,000 ರೂ. ಕಳವುಗೈದಿದ್ದಾರೆ ಎಂದು ತಿಳಿದುಬಂದಿದೆ.

ಈ ಯಂತ್ರದಲ್ಲಿ 9 ಲಕ್ಷ ರೂ. ವರೆಗೂ ನಗದು ಇದ್ದು, ಶನಿವಾರ ಅಪರಾಹ್ನ 3 ಗಂಟೆ ಸುಮಾರಿಗೆ ಈ ಮೊತ್ತವನ್ನು ವರ್ಗಾವಣೆ ಮಾಡಲಾಗಿತ್ತೆನ್ನಲಾಗಿದೆ. ಇಲ್ಲವಾದಲ್ಲಿ ಲಕ್ಷಾಂತರ ರೂ. ಕಳ್ಳರ ಪಾಲಾಗುತ್ತಿತ್ತು.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಆಗಮಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News