ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಉದ್ಘಾಟನೆ
ಉಡುಪಿ, ಜ.12: ಉಡುಪಿ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಪುರುಷ ಮತ್ತು ಮಹಿಳೆಯರ ಈಜು ಸ್ಪರ್ಧೆಯನ್ನು ರವಿವಾರ ಅಜ್ಜರಕಾಡಿನಲ್ಲಿ ರುವ ಜಿಲ್ಲಾ ಈಜು ಕೊಳದಲ್ಲಿ ಏರ್ಪಡಿಸಲಾಗಿತ್ತು.
ಸ್ಪರ್ಧೆಯನ್ನು ಉದ್ಘಾಟಿಸಿದ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ವಿಜಯ ಬಲ್ಲಾಳ್ ಮಾತನಾಡಿ, ಈಜು ಮತ್ತು ಸೈಕಲಿಂಗ್ ಮನುಷ್ಯನ ಎಲ್ಲ ಸ್ನಾಯುಗಳಿಗೆ ಶಕ್ತಿಯನ್ನು ತುಂಬುವಂತಹ ಕ್ರೀಡೆಯಾಗಿದೆ. ದೈಹಿಕವಾಗಿ ಕ್ಷಮತೆ ಇದ್ದಾಗ ಮಾನಸಿಕ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಇದರಿಂದ ಶಾಲಾ ಪಠ್ಯದಲ್ಲಿ ಆಸಕ್ತಿ ಬೆಳೆದು ಉತ್ತಮ ಅಂಕ ಳಿಸಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗಿನ್ನೆಸ್ ದಾಖಲೆಯ ಈಜು ಪಟು ಗೋಪಾಲ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ಯನ್ನು ಕ್ಲಬ್‌ನ ಅಧ್ಯಕ್ಷ ರಾಮಕೃಷ್ಣ ರಾವ್ ವಹಿಸಿದ್ದರು.
ಕ್ಲಬ್‌ನ ಕಾರ್ಯದರ್ಶಿ ಕೃಪಾ ಪ್ರಸಿಧ್, ಉಪಾಧ್ಯಕ್ಷೆ ಮಂಜುಳಾ ಉಪಸ್ಥಿತರಿ ದ್ದರು. ಆರ್ಯ ಪ್ರಸಿಧ್ ಸ್ವಾಗತಿಸಿದರು. ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಒಟ್ಟು 90 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದು, ಇದರಲ್ಲಿ ಸುಮಾರು 150 ಮಂದಿ ಸ್ಪರ್ಧಿಳು ಭಾಗವಹಿಸಿದ್ದರು.