ಮಕ್ಕಳಿಗೆ ಪರೀಕ್ಷೆ ಎದುರಿಸಲು ಮಾನಸಿಕ ದೃಢತೆ ಅಗತ್ಯ: ಗಾಡ್‌ಫ್ರೀ ಡಿಸೋಜ
ಉಡುಪಿ, ಜ.12: ಉದ್ಯಾವರ ಸಂತ ಜೇವಿಯರ್ ಪದವಿ ಪೂರ್ವ ಕಾಲೇಜಿನ ಇಂಟರಾಕ್ಟ್ ಕ್ಲಬ್ ಹಾಗೂ ರೋಟರಿ ಕ್ಲಬ್ ಉಡುಪಿ ರಾಯಲ್ ಇವುಗಳ ಜಂಟಿ ಆಶ್ರಯದಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಕಾಲೇಜಿ ನಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಉದ್ಯಾವರ ಸಂತ ಜೇವಿಯರ್ ಪದವಿ ಪೂರ್ವ ಕಾಲೇಜಿನ ಶಾಲಾ ಆಡಳಿತ ಮಂಡಲಿ ಸದಸ್ಯ ಗಾಡ್‌ಫ್ರೀ ಡಿಸೋಜ ಮಾತನಾಡಿ, ಹತ್ತನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಪ್ರಬುದ್ಧರಾಗಿ ಬೆಳೆಯುವ ಹಂತದಲ್ಲಿರುವುದರಿಂದ ಅವರ ಮಾನಸಿಕ ಸ್ಥಿತಿ ಚಂಚಲವಾಗಿ ರುತ್ತದೆ ಮತ್ತು ಅವರಿಗೆ ಏಕಾಗ್ರತೆಯ ಕೊರತೆ ಸಾಕಷ್ಟು ಕಾಡುತ್ತದೆ. ಇದರಿಂದಾಗಿ ಅನೇಕ ವಿದ್ಯಾರ್ಥಿಗಳು ಮಹತ್ವದ ಪರಿಕ್ಷೆಗಳಲ್ಲಿ ಉತ್ತಮ ಫಲಿ ತಾಂಶಗಳನ್ನು ಗಳಿಸಲು ವಿಫಲರಾಗುತ್ತಾರೆ. ಆದುದರಿಂದ ವಿದ್ಯಾರ್ಥಿಗಳ ಮಾನಸಿಕ ದೃಢತೆಯನ್ನು ವೃದ್ಧಿಸಲು ತರಬೇತಿ ಶಿಬಿರಗಳು ಅಗತ್ಯ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನರೇಂದ್ರ ಕುಮಾರ್ ಕೋಟ ಕಾರ್ಯಾಗಾರವನ್ನು ನಡೆಸಿಕೊಟ್ಟರು. ರಾಯಲ್ ಸ್ಥಾಪಕಾಧ್ಯಕ್ಷ ರತ್ನಾಕರ್ ಇಂದ್ರಾಳಿ, ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ಕಾರ್ಯಕ್ರಮ ಸಂಯೋಜಕರಾದ ಸತೀಶ್ ಜತ್ತನ್, ಅಲ್ವಿನ್ ಅಂದ್ರಾದೆ, ಶಿಕ್ಷಕಿ ಸಿಂತಿಯಾ ಪೆರೇರಾ ಉಪಸ್ಥಿತರಿದ್ದರು.
ಶಾಲಾ ಉಪ ಮುಖ್ಯೋಪಾಧ್ಯಾಯಿನಿ ಪುಷ್ಪಾ ತಾವೂರ್ ಅಧ್ಯಕ್ಷತೆ ವಹಿಸಿ ದ್ದರು. ರಾಯಲ್ ಅಧ್ಯಕ್ಷ ಯಶವಂತ್ ಬಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ದರು. ಇಂಟರಾಕ್ಟ್ ಕ್ಲಬ್ ಅಧ್ಯಕ್ಷ ಸುಜನ್ ಸ್ವಾಗತಿಸಿದು. ಕಾರ್ಯದರ್ಶಿ ಸ್ಪೂರ್ತಿ ವಂದಿಸಿದರು